DAKSHINA KANNADA
ಕಡಬದಲ್ಲಿ ಬೈಕನ್ನು ಅಟ್ಟಾಡಿಸಿದ ಕಾಡಾನೆ…!

ಕಡಬ, ಡಿಸೆಂಬರ್ 29: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಕಾಡಾನೆಯೊಂದು ಅಟ್ಟಾಡಿಸಿದಾಗ ವ್ಯಕ್ತಿ ಬಿದ್ದು ಗಾಯಗೊಂಡಿರುವ ಘಟನೆ ಕಡಬ ತಾಲೂಕಿನ ಪೇರಡ್ಕ ಸಮೀಪದ ಮೀನಾಡಿ ಎಂಬಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.
ನಿನ್ನೆ ಮೀನಾಡಿ ನಿವಾಸಿ ಶೌಕತಲಿ ಮುಸ್ಲಿಯಾರ್ ಎಂಬವರು ತನ್ನ ಬೈಕಿನಲ್ಲಿ ಕಡಬ ಕಡೆಗೆ ಹೊರಟಿದ್ದರು.ಅವರು ರಸ್ತೆಗೆ ತಲುಪುತ್ತಿದ್ದಂತೆ ಕಾಡಾನೆಯನ್ನು ಎದುರಾಗಿದೆ. ಆನೆ ಕಂಡು ಶೌಕತಲಿ ಬೈಕನ್ನು ನಿಲ್ಲಿಸಿದ್ದಾರೆ . ಈ ವೇಳೆ ಅವರನ್ನು ಅಟ್ಟಿಸಿಕೊಂಡು ಬಂದ ಕಾಡಾನೆಯು ಬೈಕನ್ನು ತುಳಿದು ಹಾನಿಗೊಳಿಸಿದ್ದು, ಆನೆಯಿಂದ ತಪ್ಪಿಸುವ ಭರದಲ್ಲಿ ಶೌಕತಲಿಯವರು ಕುಸಿದು ಬಿದ್ದು ಗಾಯಗೊಂಡಿದ್ದಾರೆ.

ಸಂಜೆಯಾಗುತ್ತಿದ್ದಂತೆಯೇ ಆನೆಯ ಘರ್ಜನೆ ಮತ್ತೆ ಕೇಳತೊಡಗಿದೆ. ಇದು ಸ್ಥಳೀಯರಲ್ಲಿ ಮತ್ತೆ ಆತಂಕ ಮೂಡಿಸಿದ್ದು, ಮನೆಯಿಂದ ಹೊರಗೆ ಬರೋದಕ್ಕೆ ಹೆದರುವಂತಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.