DAKSHINA KANNADA
ಕಡಬ – ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ

ಮಂಗಳೂರು ಮೇ 28 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಕಾಡಾನೆ ಉಪಟಳ ಜಾಸ್ತಿಯಾಗಿದ್ದು, ಇದೀಗ ಕಡಬದಲ್ಲಿ ಕಾಡಾನೆಯೊಂದು ಕೆಲಸಕ್ಕೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದೆ.
ಕಡಬ ತಾಲೂಕಿನ ಇಚ್ಲಂಪಾಡಿ ನಡುಮನೆ ಕ್ರಾಸ್ ಬಳಿ ಘಟನೆ, ವಿಜುಕುಮಾರ್ ಎಂಬವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಗಭೀರವಾಗಿ ಗಾಯಗೊಂಡ ವಿಜುಕುಮಾರ್ ಕಡಬದಲ್ಲಿ ಪ್ರಥಮ ಚಿಕಿತ್ಸೆ ನೀಡಿ. ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ,

2 ಕಾಡಾನೆಗಳು ಕಡಬದ ಇಚ್ಲಂಪಾಡಿ ಭಾಗದಲ್ಲಿ ಓಡಾಟ ನಡೆಸುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು. ಈ ಹಿನ್ನಲೆ ಸುಬ್ರಹ್ಮಣ್ಯ-ಧರ್ಮಸ್ಥಳ ಭಾಗದಲ್ಲಿ ಸಂಚರಿಸುವಾಗ ಪ್ರವಾಸಿಗರು ಎಚ್ಚರದಿಂದ ಇರಬೇಕು ಎಂದು ಹೇಳಲಾಗಿದೆ.