DAKSHINA KANNADA
ಪುತ್ತೂರು – ಕೊನೆಗೂ ನಡೆಯಿತು ಕಾಡು ಹಂದಿಯ ಪೋಸ್ಟ್ ಮಾರ್ಟಂ
ಪುತ್ತೂರು ಫೆಬ್ರವರಿ 14: ಸೋಮವಾರ ಸಂಜೆ ಲಾರಿಯಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಕಾಡು ಹಂದಿಗಳನ್ನು ಸಾರ್ವಜನಿಕರಿಂದ ಪಡೆದ ಅರಣ್ಯ ಇಲಾಖೆ ಚಿಕಿತ್ಸೆ ನೀಡಿದೆ.
ಸೋಮವಾರ ಸಂಜೆ ಲಾರಿಯಡಿಗೆ ಸಿಲುಕಿ ಕೆಲವು ಕಾಡು ಹಂದಿಗಳು ಗಂಭೀರ ಗಾಯಗೊಂಡಿದ್ದವು. ಈ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಕಾಡು ಹಂದಿಗಳನ್ನು ತಮ್ಮ ತಮ್ಮ ಕಾರಿನಲ್ಲಿ ಕೊಂಡೊಯ್ದಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ತಾವು ತೆಗೆದುಕೊಂಡು ಹೋಗಿದ್ದ ಕಾಡು ಹಂದಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು.
ಬಳಿಕ ಅರಣ್ಯ ಇಲಾಖೆ ಗಾಯಗೊಂಡಿದ್ದ ಕಾಡುಹಂದಿಗಳಿಗೆ ಚಿಕಿತ್ಸೆ ನೀಡಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಒಂದು ಕಾಡು ಹಂದಿ ಸಾವನಪ್ಪಿದೆ. ಇನ್ನುಳಿದ ಏಳು ಹಂದಿಗಳು ಸಣ್ಣ ಪುಟ್ಟಗಾಯಗೊಂಡಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಸಾವನಪ್ಪಿದ ಹಂದಿಯನ್ನು ಅರಣ್ಯ ಇಲಾಖೆಯ ಕಾನೂನಿನ ಅನ್ವಯ ಹಂದಿಯ ಪೋಸ್ಟ್ ಮಾರ್ಟಂ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್ ಬಿ.ಎಂ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.