DAKSHINA KANNADA
ಸುಳ್ಯ, ರಬ್ಬರ್ ಟ್ಯಾಪಿಂಗ್ ಮಹಿಳೆ ಮೇಲೆ ಕಾಡು ಹಂದಿ ದಾಳಿ..!
ಸುಳ್ಯ : ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಕಾಡುಹಂದಿ ದಾಳಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಕಾಡ ಹಂದಿಯ ದಾಳಿಗೆ ಮಹಿಳೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಳ್ಯ ತಾಲೂಕು ದುಗಲಡ್ಕ ಕೂಟೇಲು ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಫೆ. 22 ರಂದು ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಈ ಘಟನೆ ನಡೆದಿದೆ. ಪೊದೆಯಲ್ಲಿದ್ದ ಕಾಡುಹಂದಿ ಪದ್ಮಾವತಿ ಮೇಲೆ ಏಕಾಏಕಿ ಧಾಳಿ ನಡೆಸಿತೆನ್ನಲಾಗಿದೆ. ದಾಳಿಯಿಂದ ಪಾರಾಗಲು ಓಡಿದ ಮಹಿಳೆಯನ್ನು ಬೆನ್ನಟ್ಟಿದ ಕಾಡುಹಂದಿ ಮತ್ತೊಮ್ಮ ಕಚ್ಚಿ ತೀವ್ರ ಗಾಯಗೊಳಿಸಿತೆಂದು ತಿಳಿದುಬಂದಿದೆ. ವಿಷಯ ತಿಳಿದ ಇತರ ಟ್ಯಾಪರ್ ಗಳು ಕೆ.ಎಫ್.ಡಿ.ಸಿ. ಅಧಿಕಾರಿಗಳಿಗೆ ತಿಳಿಸಿದ ಕೂಡಲೇ ಅವರು ವಾಹನ ತಂದು, ನಿಗಮದ ಸಿಬ್ಬಂದಿ ಮತ್ತು ಊರವರು, ಬಂಧುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ರಬ್ಬರ್ ತೋಟದಲ್ಲಿ ಪದೆಗಳು ಹೆಚ್ಚಾಗಿ ಆಳೆತ್ತರಕ್ಕೆ ಬೆಳೆದಿದ್ದು ಇದರಲ್ಲಿ ಕಾಡು ಹಂದಿ ಸೇರಿದಂತೆ ವಿವಿಧ ವನ್ಯ ಪ್ರಾಣಿಗಳು ಅವಿತು ಕುಳಿತುಕೊಳ್ಳತ್ತಿದ್ದು, ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ.