Connect with us

    LATEST NEWS

    ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು – ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

    ನಾಗ್ಪುರ ಜೂನ್ 3: ದೇಶದಲ್ಲಿರುವ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.


    ನಾಗ್ಪುರದಲ್ಲಿ ಆರ್ ಎಸ್ಎಸ್ ತರಭೇತಿ ಶಿಬಿರದಲ್ಲಿ ಮಾತನಾಡಿದ ಅವರು ಜ್ಞಾನವಾಪಿ ವಿವಾದವು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಬಗ್ಗೆ ನ್ಯಾಯಾಲಯದ ನಿರ್ಧಾರವನ್ನು ಎಲ್ಲರು ಒಪ್ಪಬೇಕು, ಆದರೆ ವಿವಾದಕ್ಕಾಗಿ ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅವಶ್ಯಕತೆ ಇಲ್ಲ ಎಂದರು.

    ಅಯೋಧ್ಯೆತರಹದ ಆಂದೋಲನಗಳನ್ನು ಕೈಗೊಳ್ಳುವುದಿಲ್ಲ ಎಂದು ಆರ್‌ಎಸ್‌ಎಸ್‌ ಈಗಾಗಲೇ ಸ್ಪಷ್ಟಪಡಿಸಿದೆ. ಈಗ ವಾರಾಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಕುರಿತು ಚರ್ಚೆ ನಡೆಯುತ್ತಿದೆ ಎಂದರು. ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ. ಈಗಿನ ಹಿಂದೂಗಳು ಮತ್ತು ಮುಸ್ಲಿಂರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಸ್ಲಿಂ ಆಕ್ರಮಣಕಾರರು ಭಾರತಕ್ಕೆ ಆಗಮಿಸಿದ ವೇಳೆ ಇವೆಲ್ಲವು ಸಂಭವಿಸಿದವು. ಆಕ್ರಮಣಕಾರರು ಸ್ವಾತಂತ್ರ್ಯ ಬಯಸುವ ಜನರ ಆತ್ಮಸ್ಥೈರ್ಯ ಕುಂದಿಸಲು ದೇಗುಲಗಳನ್ನು ಧ್ವಂಸಗೊಳಿಸಿದರು. ಇಂತಹ ಸಾವಿರಾರು ದೇವಸ್ಥಾನಗಳಿವೆ. ಈ ಬಗ್ಗೆ ಸಂಘವು ಯಾವುದೇ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *