LATEST NEWS
ಮಹಾಕುಂಭಮೇಳದ ಮೊನಾಲಿಸಾಗೆ ಯೂಟ್ಯೂಬರ್ ಗಳ ಕಾಟ…!!
ಪ್ರಯಾಗ್ ರಾಜ್ ಜನವರಿ 20: ತನ್ನ ಸೌಂದರ್ಯದಿಂದ ಮಹಾಕುಂಭಮೇಳದಲ್ಲಿ ಎಲ್ಲರ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ ಎಂಬ ಯುವತಿಗೆ ಈಗ ಆಕೆಯ ಸೌಂದರ್ಯವೇ ಮುಳಾಗಿದೆ. ರಾತ್ರೋರಾತ್ರಿ ವೈರಲ್ ಆದ ಬೆನ್ನಲ್ಲೇ ಆಕೆಯ ಹಿಂದೆ ಯೂಟ್ಯೂಬರ್ ಹಿಂದೆ ಬಿದ್ದಿದ್ದು, ಆಕೆಯ ವ್ಯಾಪಾರಕ್ಕೆ ಇದು ತೊಡಕಾಗಿದೆ.
ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವಿಶಿಷ್ಟ ಕಣ್ಣಿನ ಸುಂದರಿ ಮೊನಾಲಿಸಾ ಭೋಸ್ಲೆ (16) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಂದರ್ಯದಿಂದ ವೈರಲ್ ಆಗಿದ್ದರು, ಎಲ್ಲಿ ನೋಡಿದರೂ ಆಕೆಯ ವಿಡಿಯೋಗಳೇ ಇತ್ತು, ರಾತ್ರೋರಾತ್ರಿ ಸ್ಟಾರ್ ಆದ ಬೆನ್ನಲ್ಲೇ ಆಕೆಯ ಹಿಂದೆ ತಿರುಗಾಡುವ ಜನರು ಹೆಚ್ಚಾಗಿ ಆಕೆಗೆ ವ್ಯಾಪಾರ ಮಾಡದಂತೆ ಆಗಿದೆ. ಇದೀಗ ನೆಟ್ಟಿಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆ ದಿದ್ದಾರೆ.
ಮಧ್ಯ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ, ಮಾಲೆ ಖರೀದಿಸಲು ಬರುತ್ತಿದ್ದವರೆಲ್ಲ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು ಆಕೆಯ ತಂಗಿ ಹೇಳಿದ್ದಾರೆ.