LATEST NEWS
ಭಾರತ ಜಾಗತಿಕವಾಗಿ ಸೂಪರ್ ಪವರ್ ಆಗುತ್ತಿದ್ದರೆ ನಾವು ಭಿಕ್ಷೆ ಬೇಡುತ್ತಿದ್ದೆವೆ – ಪಾಕಿಸ್ತಾನದ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್
ಇಸ್ಲಾಮಾಬಾದ್ ಎಪ್ರಿಲ್ 30: ನಮ್ಮ ಪಕ್ಕದ ದೇಶ ಭಾರತ ಸೂಪರ್ ಪವರ್ ಆಗುತ್ತಿದ್ದರೆ ನಾವು ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಪಾಕಿಸ್ತಾನದಲ್ಲಿ ನಡೆದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದೇ ದಿನ. ಆದರೆ ಇಂದು ಅವರು ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ದಾರೆ. ನಾವು ದಿವಾಳಿತನ ತಪ್ಪಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಭಿಕ್ಷೆ ಬೇಡುತ್ತಿದ್ದೇವೆ. ಈ ಸಮಸ್ಯೆಗಳಿಗೆ ರಾಜಕಾರಣಿಗಳೇ ಕಾರಣ ಎಂದು ಗುಡುಗಿದ್ದಾರೆ.
ನಾವು ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡಿದ್ದೇವೆ. ಆದರೆ ಇಂದು ಜಾತ್ಯತೀತ ರಾಷ್ಟ್ರವಾಗಿ ಮಾರ್ಪಟ್ಟಿದ್ದೇವೆ. 1973ರಿಂದ ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ(ಸಿಐಐ)ಯ ಒಂದೇ ಒಂದು ಶಿಫಾರಸನ್ನೂ ಜಾರಿಗೆ ತಂದಿಲ್ಲ. ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ ಎಂದೂ ಅವರು ಪ್ರಶ್ನಿಸಿದ್ದಾರೆ.
While India🇮🇳 is inching closer to become a Global Superpower, Pakistan🇵🇰 is begging before the world to save it from devastation.
[Pakistan's Parliament] pic.twitter.com/i3ZNA3kQaN
— kanishka Dadhich 🇮🇳 (@KanishkaDadhich) April 29, 2024