LATEST NEWS
ಕಾರ್ಕಳದ ಯುವಕನಿಗೆ ಪಾಕಿಸ್ತಾನ ನಂಬರ್ ನಿಂದ ವಾಟ್ಸಪ್ ಮೆಸೆಜ್

ಉಡುಪಿ, ಮೇ 11: ಭಾರತ ಮತ್ತು ಪಾಕಿಸ್ತಾನ ಯುದ್ಧದ ಉದ್ವಿಗ್ನತೆ ನಡುವೆ ಕಾರ್ಕಳದ ಯುವಕನಿಗೆ ಪಾಕಿಸ್ತಾನದಿಂದ ವಾಟ್ಸಪ್ ಮೆಸೆಜ್ ಬಂದಿದೆ.
ಕಾರ್ಕಳದ ಬಜಗೋಳಿಯ ಸುಶಾಂತ್ ಎಂಬವರಿಗೆ ಶನಿವಾರ ಬೆಳಗ್ಗೆ 10:24 ಕ್ಕೆ ಹೌ ಆರ್ ಯು ಎಂದು ಅನಾಮಿಕ ವ್ಯಕ್ತಿಯಿಂದ ಸಂದೇಶ ಬಂದಿದೆ. ಗಡಿಯಲ್ಲಿ ಯುದ್ಧದ (War) ವಾತಾವರಣ ಇರುವಾಗಲೇ ಸಂದೇಶ ಬಂದಿದ್ದರಿಂದ ಆತಂಕಗೊಂಡ ಸುಶಾಂತ್ ಕೂಡಲೆ ನಂಬರ್ ಬ್ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂತಹ ಯಾವುದೇ ಸಂದೇಶಗಳಿಗೆ ರಿಯಾಕ್ಟ್ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಯಾವುದೇ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಅನುಮಾನಾಸ್ಪದ ಸಂದೇಶ ಅಥವಾ ಲಿಂಕ್‌ಗಳಿಗೆ ಪ್ರತಿಕ್ರಿಯಿಸಬಾರದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್ ತಿಳಿಸಿದ್ದಾರೆ. ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಯಾವುದೇ ಒಟಿಪಿ ಅಥವಾ ನಿಮ್ಮ ವೈಯಕ್ತಿಕ ಮಾಹಿತಿ ಶೇರ್ ಮಾಡಬಾರದು. ಯಾವುದೇ ತುರ್ತು ಸಂದರ್ಭಗಳಿಗೆ 1930ಗೆ ಡಯಲ್ ಮಾಡಿ ಅಥವಾ www.Cybercrime.gov.in ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.