Connect with us

    KARNATAKA

    ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು..!

    ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದ ವಿಚಾರವಾಗಿ ದಾಖಲಾಗಿರುವ ಎಫ್​ಐಆರ್​ ಬಗ್ಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

    ನ್ಯಾಯ ಕೊಡಿಸಿ ಎಂದು ಬಂದಿದ್ದ ಅಮ್ಮ, ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು. ಅನ್ಯಾಯ ಆಗಿದೆ ಎಂದು ನನ್ನ ಬಳಿ ಬಂದಿದ್ದರು. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ತಾಯಿ-ಮಗಳು ಅನೇಕ ಸಲ ಇಲ್ಲಿಗೆ ಬಂದು ಹೋಗಿದ್ದರು. ಅದಾದ ಮೇಲೆ ನನ್ನ ವಿರುದ್ಧ ಏನೇನೋ ಮಾತನಾಡಿದರು. ಬಳಿಕ ಅವರನ್ನ ಪೊಲೀಸ್ ಕಮಿಷನರ್​ ಬಳಿ ಕಳಿಸಿಕೊಟ್ಟೆ. ಉಪಕಾರ ಮಾಡಿದರೆ ಈಗ ನನ್ನ ಮೇಲೆಯೇ ಹೀಗೆ ಆರೋಪ ಮಾಡಿದ್ದಾರೆ. ಯಾರೋ ಒಬ್ಬ ಹೆಣ್ಣು ಮಗಳು ದೂರು ಕೊಟ್ಟಿದ್ದಾರೆ. ಇರಲಿ ಎದುರಿಸೋಣ. ನಾನು ಈ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *