Connect with us

    LATEST NEWS

    ದಿನೇ ದಿನೇ ಕುಸಿಯುತ್ತಿರುವ ಪಶ್ಚಿಮಘಟ್ಟ ಅಪಾಯದಲ್ಲಿ ಸ್ಥಳೀಯ ನಿವಾಸಿಗಳು

    ದಿನೇ ದಿನೇ ಕುಸಿಯುತ್ತಿರುವ ಪಶ್ಚಿಮಘಟ್ಟ ಅಪಾಯದಲ್ಲಿ ಸ್ಥಳೀಯ ನಿವಾಸಿಗಳು

    ಮಂಗಳೂರು ಆಗಸ್ಟ್ 21: ಜೋಡುಪಾಳದಲ್ಲಿ ಸಂಭವಿಸಿದ ಭೂ ಕುಸಿತಕ್ಕಿಂತ ದೊಡ್ಡ ಪ್ರಮಾಣದ ದುರಂತಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದ ಹಲವಾರು ಕಡೆ ಇದೇ ರೀತಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತಗಳು ಉಂಟಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮ ಸುಳ್ಯ ತಾಲೂಕಿನ ಕಲ್ಮಕಾರಿನ ಬಳಿಯಿರುವ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿರುವುದು ಈಗ ಬೆಳೆಕಿಗೆ ಬಂದಿದೆ. ಎಸ್ಟೇಟ್ ಒಳಗಿರುವ ಹೊಳೆಯ ಸೇತುವೆ ಕೊಚ್ಚಿ ಹೋಗಿದ್ದು, ಬೃಹತ್ ಮರಗಳು ಛಿದ್ರಗೊಂಡು ಬಿದ್ದಿದೆ.

    ಮೂರು ದಿನಗಳ ಹಿಂದೆ ಈ ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದ ಸದ್ದು ಕೇಳಿದ್ದು ಇದರಿಂದ ಎಸ್ಟೇಟ್ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಭಯ ಭೀತರಾಗಿದ್ದರು. ಇದರ ಬೆನ್ನು ಹಿಡಿದ ಮಾಧ್ಯಮದವರಿಗೆ ಗೋಚರಿಲಿದ್ದು ಬಿರುಕು ಬಿಟ್ಟಿರುವ ಪಶ್ಚಿಮಘಟ್ಟ ಪ್ರದೇಶದ ಗುಡ್ಡಗಳು. ಕೂಜುಮಲೆ ಅರಣ್ಯ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಗೋಚರಿಸಿದ್ದು, ಅಲ್ಲೇ ಆಸುಪಾಸಿನ ಕಲ್ಮಕಾರು, ಬಾಳುಗೋಡು ಗ್ರಾಮಗಳ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

    ಪಶ್ಚಿಮ ಘಟ್ಟ ಸ್ಫೋಟಗೊಂಡು ಇಡೀ ಪ್ರದೇಶವೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಭಯದಿಂದ ಎಸ್ಟೇಟ್ ನಲ್ಲಿರುವ 40ಕ್ಕೂ ಹೆಚ್ಚು ತಮಿಳು ಕಾರ್ಮಿಕರು ಭಯದಿಂದ ಸ್ಥಳ ಬಿಟ್ಟು ಓಡಿಹೋಗಿದ್ದಾರೆ. ಇಲ್ಲಿ ಈ ಪ್ರಮಾಣದ ಭಾರೀ ದುರಂತ ನಡೆದಿದ್ದರು ಜನಸಂಚಾರ ಈ ಪ್ರದೇಶದಲ್ಲಿ ವಿರಳವಾಗಿರುವ ಕಾರಣ ಇಲ್ಲಿನ ಘಟನೆಯನ್ನು ಜಿಲ್ಲಾಡಳಿತ ಮುಚ್ಚಿಟ್ಟಿತ್ತು ಎಂದು ಆರೋಪಿಸಲಾಗಿದೆ .

    ಈ ಪ್ರದೇಶ ಅತ್ಯಂತ ಕುಗ್ರಾಮ ಆಗಿರುವ ಕಾರಣ ಯಾವುದೇ ಅಧಿಕಾರಿ ವರ್ಗ ಸ್ಥಳಕ್ಕೆ ತೆರಳಿರಲಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಇದೀಗ ಎಚ್ಚತ್ತುಕೊಂಡಿರುವ ಪುತ್ತೂರು ವಿಭಾಗಾಧಿಕಾರಿ ಕೃಷ್ಣಮೂರ್ತಿ ಸ್ಥಳಕ್ಕೆ ತೆರಳಿದ್ದು ಬೆಟ್ಟಗಳ ಮೇಲೆ ಏನೋ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಒಪ್ಪಿಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *