ಕಾರ್ಕಳ: ನೋಡು ನೋಡುತ್ತಿದ್ದಂತೆ ಮನೆಯೆದುರಿನ ಬಾವಿಯೊಂದು ಭೂಕುಸಿತಕ್ಕೊಳಗಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ನಡೆದಿದೆ.

ಬಾವಿ ಕುಸಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಮನೆಯಂಗಳದಲ್ಲೇ ಇದ್ದ ಬಾವಿ ಮನೆಯವರ ಕಣ್ಣೆದುರೇ ಕುಸಿತಕ್ಕೊಳಗಾಗಿ ಭೂಮಿಯಡಿ ಸೇರಿಕೊಂಡಿದೆ. ಇದೀಗ ಬಾವಿ ಪಕ್ಕದಲ್ಲೇ ಇರುವ ಮನೆ ಕೂಡ ಅಪಾಯವನ್ನು ಎದುರಿಸುತ್ತಿದ್ದು, ಮನೆಯವರು ಆಂತಕಕ್ಕೀಡಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ.