DAKSHINA KANNADA
ಮದುವೆ ಮನೆಗೆ ತೆರಳುತ್ತಿದ್ದ ಬಸ್ ಪಲ್ಟಿ : 8 ಜನರ ದಾರುಣ ಸಾವು

ಕಾಸರಗೋಡು, ಜನವರಿ 03 : ಮನೆ ಮೇಲೆ ದಿಬ್ಬಣದ ಬಸ್ ಉರುಳಿ ಬಿದ್ದು ಎಂಟು ಜನ ಸಾವನ್ನಪ್ಪಿರುವ ಘಟನೆ ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪ್ಪಳ್ಳಿ ಬಳಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಗಡಿಗುಡ್ಡೆ ಎಂಬಲ್ಲಿ ಈ ಅವಘಡ ಸಂಭವಿಸಿದ್ದು, ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ ಬಸ್ ತೆರಳುತ್ತಿತ್ತು.

ಅಫಘಾತದಲ್ಲಿ ಮೃತರ ಸಂಖ್ಯೆ ಎಂಟಕ್ಕೇರಿದ್ದು, ಹತ್ತಕ್ಕೂ ಹೆಚ್ಚು ಜನರ ಪರಿಸ್ಥಿತಿ ಗಂಭೀರವಾಗಿದೆ. 30 ಕ್ಕೂ ಹೆಚ್ಚು ಮಂದಿಗೆ ಗಾಯಗೊಡಿದ್ದಾರೆ. ರಾಜೇಶ್,ರವಿಚಂದ್ರ,ಆದರ್ಶ್, ಶ್ರೇಯಸ್ ಸುಮತಿ,ಶಶಿ,ಜಯಲಕ್ಷ್ಮಿ ಮೃತರು
ಕೊಡಗಿನ ಚೆತ್ತುಕಯದ ವರನ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ, ಪುತ್ತೂರಿನ ಈಶ್ವರ ಮಂಗಲದ ವಧುವಿನ ಮನೆಯಿಂದ ಹೊರಟ್ಟಿದ್ದ ದಿಬ್ಬಣದ ಬಸ್ ಸುಳ್ಯದ ಅಲೆಟ್ಟಿ ಮೂಲಕ ಕಲ್ಲಪಲ್ಲಿ ಪಾಣತ್ತೂರು ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಪೆರಿಯಾರಂ ಘಾಟ್ ರಸ್ತೆಯಲ್ಲಿ ಚಾಲನ ನಿಯಂತ್ರಣ ತಪ್ಪಿ ಬಸ್ ಮನೆಯ ಮೇಲೆ ಬಿದ್ದಿದೆ. ಮದುವೆ ದಿಬ್ಬಣದ ಬಸ್‌ನಲ್ಲಿ 63 ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Kerala: Chief Minister Pinarayi Vijayan expressed his condolences over the death of five Karnataka natives when a bus carrying a wedding party overturned on a house in Kasargod.
He said that that medical facilities have been set up for the injured. https://t.co/TZwur3x1BR— ANI (@ANI) January 3, 2021
ಈ ಘಟನೆ ಬಗ್ಗೆ ತನಿಖೆ ಮಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ.
Video: