Connect with us

DAKSHINA KANNADA

‘ಒಳ್ಳೆಯ ಸ್ಕ್ರಿಪ್ಟ್ ನ ತುಳು ಸಿನಿಮಾದಲ್ಲಿ ನಟಿಸಲು ಕಾತರರಾಗಿದ್ದೇವೆ’: ಅಶ್ವಿತಿ ಅದ್ವಿತಿ ಶೆಟ್ಟಿ ಅವಳಿ ಸಹೋದರಿಯರು..!

ಮಂಗಳೂರು : ಒಂದು ಒಳ್ಳೇಯ ಸ್ಕ್ರಿಪ್ಟ್ ಸಿಕ್ಕಿದ್ರೆ ತುಳು ಸಿನಿಮಾ ದಲ್ಲಿ ನಟಿಸಲು ಬದ್ದರಾಗಿದ್ದು ಒಳ್ಳೆಯ ಸ್ಕ್ರಿಪ್ಟ್‌ಗಾಗಿ ನಾವು ಕಾತರರಾಗಿದ್ದೇವೆ ಎಂದು ಮಂಗಳೂರು ಮೂಲದ ಅವಳಿ ರೂಪದರ್ಶಿ ಸಹೋದರಿಯರಾದ ಅಶ್ವಿತಿ ಹಾಗೂ ಅದ್ವಿತಿ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಯುಗಾದಿ ಸಂದರ್ಭಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ನಾವು ಸಹೋದರಿಯರು ಇಬ್ಬರೂ ಜತೆಯಾಗಿ ನಟಿಸಿದ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಅದ್ಭುತವಾದ ಯಶಸ್ಸು ಕಂಡಿತು. ಉತ್ತಮ ಚಿತ್ರಕತೆ ಇರುವ ಪಾತ್ರಗಳು ದೊರೆತಾಗ ಖಂಡಿತವಾಗಿಯೂ ಮತ್ತೆ ಜತೆಯಾಗಿ ನಟಿಸುವುದಾಗಿ ಅದ್ವಿತಿ ಶೆಟ್ಟಿ ಹೇಳಿದರು
ಅಶ್ವಿಥಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಕೂಡ್ಲ ಮೂಲದ ಅವಳಿ ಸಹೋದರಿಯರು. ಇಬ್ಬರು ಸಹೋದರಿಯರು ಮನರಂಜನಾ ಕ್ಷೇತ್ರದ ಎಲ್ಲ ವಿಧಗಳಲ್ಲೂ ಸಕ್ರಿಯವಾಗಿದ್ದಾರೆ. ಹಲವಾರು ಡ್ಯಾನ್ಸ್ ಶೋ ಗಳನ್ನು ನೀಡಿದ್ದಾರೆ.‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ಮೂಲಕ ಇಬ್ಬರು ಸಹೋದರಿಯರು ಚಂದನವನ ಪ್ರವೇಶಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿದ್ದಾರೆ. ರಾಮಾಚಾರಿ ನಂತರ ಬಿಡುಗಡೆಗೊಂಡ ‘ಸುಳಿ’ ಚಿತ್ರದಲ್ಲಿ ಕೂಡ ಇಬ್ಬರು ಅಭಿನಯಿಸಿದರು.
ಮಂಗಳೂರು ಮೂಲದ ಯತಿರಾಜ್ ಶೆಟ್ಟಿ ಮತ್ತು ನಂದಾ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಅಶ್ವಿಥಿ ಮಣಿಪಾಲ್ ಮ್ಯಾನೇಜಮೆಂಟ್ ಇನ್ಸ್ಟಿಟ್ಯೂಟ್‌ನ ಪದವೀಧರೆ.‘ಮಿಸ್ ಬಂಟ್ ಬೆಂಗಳೂರು’,‘ಮಿಸ್ ಮಂಗಳೂರು ಬ್ಯೂಟಿ ಹೇರ್’ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *