Connect with us

    LATEST NEWS

    ವಯನಾಡ್ ದುರಂತದ ಬಗ್ಗೆ ತುರ್ತು ಸೇವೆಗಳಿಗೆ ಕರೆ ಮಾಡಿದ್ದ ನೀತು ಜೊಜೊ ಅದೇ ದುರಂತದಲ್ಲಿ ಸಾವು

    ವಯನಾಡ್ ಅಗಸ್ಟ್ 05: ಜುಲೈ 30 ರಂದು ವಯನಾಡಿನಲ್ಲಿ ಉಂಟಾಗಿದ್ದ ದುರಂತದ ಬಗ್ಗೆ ತುರ್ತು ಸೇವೆಗಳಿಗೆ ಕರೆ ಮಾಡಿದ ಮಹಿಳೆಯ ಅದೇ ದುರಂತದಲ್ಲಿ ಸಾವನಪ್ಪಿರುವ ಬಗ್ಗೆ ವರದಿಯಾಗಿದೆ.
    ವಯನಾಡ್ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿದ್ದ ನೀತು ಜೊಜೊ (40) ಅವರೇ ಭೂಕುಸಿತದಲ್ಲಿ ಮೃತಪಟ್ಟ ನತದೃಷ್ಟ ಮಹಿಳೆ.


    ನೀತು ಅವರು ಜು.30ರಂದು ಚೋರಲಾಮಾಲಾದಲ್ಲಿ ಮೊದಲ ಭೂಕುಸಿತ ಸಂಭವಿಸಿದಾಗ ಬೆಳಿಗ್ಗೆ 2 ಗಂಟೆ ಸುಮಾರು ಪೊಲೀಸರಿಗೆ ಚೋರಲಾಮಾಲಾದ ಮನೆಯಿಂದ ತುರ್ತು ಕರೆ ಮಾಡಿದ್ದರು.
    ಶಾಲೆ ಬಳಿ ನಮ್ಮ ಮನೆ ಇದೆ. ಮನೆಗೆ ಭಾರಿ ಪ್ರಮಾಣದಲ್ಲಿ ನೀರು, ಮಣ್ಣು ನುಗ್ಗುತ್ತಿದೆ. ಐದಾರು ಕುಟುಂಬಗಳು ನಮ್ಮ ಅಕ್ಕ–ಪಕ್ಕ ಇವೆ. ಹೇಗಾದರೂ ಮಾಡಿ ರಕ್ಷಣೆ ಮಾಡಿ’ ಎಂದು ನೀತು ಅವರು ಜೋರಾಗಿ ಮೊಬೈಲ್‌ನಲ್ಲಿ ಮಾತನಾಡಿದ್ದು ತುರ್ತು ಕರೆ ಘಟಕದಲ್ಲಿ ದಾಖಲಾಗಿದೆ.

    ನೀತು ಅವರೇ ವಯನಾಡ್ ಭೂಕುಸಿತದ ಬಗ್ಗೆ ಮೊದಲು ಕರೆ ಮಾಡಿ ಮಾಹಿತಿ ನೀಡಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ವಯನಾಡ್‌ನಿಂದ ಅಂಬುಲೆನ್ಸ್ ಚೋರಲಾಮಾಲಾಕ್ಕೆ ತೆರಳುವ ವೇಳೆ ಅದಾಗಲೇ ಭಾರಿ ಮಳೆ, ಎರಡನೇ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿದ್ದರಿಂದ ಸಂಪರ್ಕ ಮಾರ್ಗಗಳು ಕಡಿತಗೊಂಡಿದ್ದವು. ನೀತು ಅವರನ್ನು ರಕ್ಷಣೆ ಮಾಡಲಾಗಲಿಲ್ಲ. ಅವರ ಮೃತದೇಹ ಸಿಕ್ಕಿದೆ. ಘಟನೆಯಲ್ಲಿ ಅವರ ತಾಯಿ ಹಾಗೂ ಮಕ್ಕಳು ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *