Connect with us

    LATEST NEWS

    ಸುಳಿಗಾಳಿ ರಭಸಕ್ಕೆ ಆಕಾಶದೆಡೆಗೆ ಚಿಮ್ಮಿದ ನದಿ ನೀರು..ವಿಡಿಯೋ ವೈರಲ್

    ಉಡುಪಿ ಸೆಪ್ಟೆಂಬರ್ 13: ಉಡುಪಿಯ ಪಾಪನಾಶಿನಿ ನದಿಯ ಮಧ್ಯದಲ್ಲಿ ಕಾಣಿಸಿಕೊಂಡ ಸುಳಿಗಾಳಿಗೆ ನದಿ ನೀರು ಆಕಾಶದಡೆಗೆ ಚಿಮ್ಮಿದ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಜನರು ಮೊಬೈಲ್ ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

    ಉಡುಪಿಯ ಅಂಬಲಪಾಡಿ, ಕಿದಿಯೂರು ಚಕ್‌ಪಾದೆಯಲ್ಲಿ ಪಾಪನಾಶಿನಿ ನದಿ ತೀರದಲ್ಲಿ ಈ ಘಟನೆ ನಡೆದಿದ್ದು, ನದಿ ಮದ್ಯದಲ್ಲಿ ಸುಳಿಗಾಳಿ ಕಾಣಿಸಿಕೊಂಡಿದ್ದು, ಇದರ ಪ್ರಭಾವಕ್ಕೆ ನದಿ ನೀರು ಆಕಾಶೆದೆಡೆಗೆ ಚಿಮ್ಮಿದೆ. ಗಾಳಿಯ ರಭಸಕ್ಕೆ ಆಕಾಶಕ್ಕೆ ನೀರು ಚಿಮ್ಮುತ್ತಿರುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *