Connect with us

    DAKSHINA KANNADA

    ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂ ಒಳ ಹರಿವು ಸ್ಥಗಿತ, ಮಹಾನಗರಕ್ಕೆ ತಟ್ಟಲಿದೆಯಾ ನೀರಿನ ಬಿಸಿ.!?

    ನಗರದ ಹಲವು ಕಡೆ ಕುಡಿಯುವ ನೀರಿನ ಅಸಮರ್ಪಕ  ಪೂರೈಕೆಯಿಂದ ಸಮಸ್ಯೆ  ಎದುರಾಗಿದೆ.  ಈ ಮಧ್ಯೆ ನಗರಕ್ಕೆನೀರು ಪೂರೈಕೆ ಮಾಡುವ ನೇತ್ರಾವತಿ ನದಿಯ ತುಂಬೆ ಡ್ಯಾಂ ಗೆ ನೀರಿನ ಒಳಹರಿವು  ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ.

    ಮಂಗಳೂರು :  ಫೆಬ್ರವರಿ ಮೊದಲ  ವಾರದಿಂದಲೇ ಕರಾವಳಿಯಲ್ಲಿ ತೀವ್ರಗೊಂಡ ಬಿಸಿಲಿನ ಝಳ ನೀರಿನ ಮೇಲೆ  ಪರಿಣಾಮ ಬೀರಲಾರಂಭಿಸಿದ್ದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಆತಂಕ ಹೆಚ್ಚಿಸಿದೆ.

    ಈಗಾಗಲೇ ನಗರದ ಹಲವು ಕಡೆ ಕುಡಿಯುವ ನೀರಿನ ಅಸಮರ್ಪಕ  ಪೂರೈಕೆಯಿಂದ ಸಮಸ್ಯೆ  ಎದುರಾಗಿದೆ.  ಈ ಮಧ್ಯೆ ನಗರಕ್ಕೆನೀರು ಪೂರೈಕೆ ಮಾಡುವ ನೇತ್ರಾವತಿ ನದಿಯ ತುಂಬೆ ಡ್ಯಾಂ ಗೆ ನೀರಿನ ಒಳಹರಿವು  ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ. ಈ ಹಿನ್ನೆಯಲ್ಲಿ ಮುಂಜಾಗೃತಾ ಕ್ರಮವಾಗಿ  ತುಂಬೆ ಕಿಂಡಿ ಅಣೆಕಟ್ಟಿನ ಎಲ್ಲಾ ಗೇಟ್‌ಗಳನ್ನು ಬಂದ್ ಮಾಡಲಾಗಿದ್ದು, ಸದ್ಯ 6 ಮೀಟರ್ ನೀರು ಸಂಗ್ರಹವಿದೆ. ಈ ಮಧ್ಯೆ ಅಣೆಕಟ್ಟಿನ ಕೆಳಭಾಗದಿಂದ ನೀರೆತ್ತಲು ಕ್ರಮ ಕೈಗೊಳ್ಳಲಾಗಿದ್ದು  ಪಂಪ್ ಅಳವಡಿಸಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು   ಪಾಲಿಕೆ ಆಯುಕ್ತರಾದ  ಆನಂದ್  ಪರಿಶೀಲಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *