DAKSHINA KANNADA
ಮಂಗಳೂರು ನಗರಕ್ಕೆ ಜಲಕ್ಷಾಮ – ಮೇ 5 ರಿಂದ ಮಂಗಳೂರಿನಲ್ಲಿ ವಾಟರ್ ರೇಷನಿಂಗ್ ಪ್ರಾರಂಭ
ಮಂಗಳೂರು ಮೇ 03: ಮಳೆ ಕೊರತೆ ಜೊತೆಗೆ ಬೀರು ಬಿಸಿಲಿಗೆ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ಈ ಹಿನ್ನಲೆ ಮಂಗಳೂರು ನಗರದಲ್ಲಿ ಮೇ 5 ರಿಂದ ನೀರಿನ ರೇಷನಿಂಗ್ ಪ್ರಾರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ 05.05.2024 ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಮನಪಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ ಪ್ರದೇಶಕ್ಕೆ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ (Alternative days) ನೀರು ಬಿಡಲು ಕ್ರಮ ವಹಿಸಲಾಗಿದ್ದು ಪ್ರದೇಶಗಳ ವಿವರ ಈ ಕೆಳಗಿನಂತಿದೆ.
05-05-2024 (ಬೆಸ ದಿನಗಳು) ರಿಂದ ಬೆಂದೂರು ರೇಚಕ ಸ್ಥಾವರ ಪ್ರದೇಶಗಳು ಕೋರ್ಟ್ ವಾರ್ಡ್, ಕಾರ್ ಸ್ಟ್ರೀಟ್, ಬಾವುಟಗುಡ್ಡೆ ಟ್ಯಾಂಕ್, ಆಕಾಶವಾಣಿ ಟ್ಯಾಂಕ್, ಪದವು ಟ್ಯಾಂಕ್, ಗೋರಿಗುಡ್ಡೆ, ಸೂಟರ್ ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಬೆಂದೂರು ಲೋ ಲೆವೆಲ್ ಪ್ರದೇಶಗಳಾದ ಕಾರ್‌ಸ್ಟ್ರೀಟ್, ಕುದ್ರೋಳಿ ಫಿಷಿಂಗ್ ಹಾರ್ಬರ್, ಕೊಡಿಯಾಲ್ ಬೈಲ್ ಇತ್ಯಾದಿ
ಪಡೀಲ್ ಸ್ಥಾವರ ರೇಚಕ ಸ್ಥಾವರದ ಪ್ರದೇಶಗಳು ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜೆಪ್ಪಿನಮೊಗರು, ಬಿಕರ್ನಕಟ್ಟೆ ಟ್ಯಾಂಕ್, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು.
ಶಕ್ತಿನಗರ ಟ್ಯಾಂಕ್ ನಿಂದ ಕುಂಜತ್ ಬೈಲ್, ಮುಗ್ರೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವ ನಗರ, ಬೋಂದೆಲ್, ಗಾಂಧಿ ನಗರ, ಶಾಂತಿನಗರ, ಕಾವೂರು
ತುಂಬೆ ಪಣಂಬೂರು ಡೈರೆಕ್ಟ್ ಲೈನ್ ನಿಂದ ಕಂಕನಾಡಿ, ನಾಗುರಿ, ಬಲ್ಲೂರುಗುಡ್ಡೆ, ಪಡೀಲ್. ಪಂಪ್ ವೆಲ್ ಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.
06-05-2024( ಸಹ ದಿನಗಳು) ರಿಂದ ಪಣಂಬೂರು ಸ್ಥಾವರ ರೇಚಕ ದಿಂದ ಸುರತ್ಕಲ್, ಎನ್ ಐ.ಟಿ ಕೆ. ಮುಕ್ಕ, ಹೊಸಬೆಟ್ಟು, ಕುಳಾಯಿ, ಪಣಂಬೂರು, ಮೀನಕಳಿಯ.
ಪಡೀಲ್ ಸ್ಥಾವರ ರೇಚಕ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡೆ, ಮುಗೇರ್, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೇ ಸ್ಟೇಷನ್ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಗೂಡ್ ಶೆಡ್, ಧಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರ ನಗರ.
ಶಕ್ತಿನಗರ ಟ್ಯಾಂಕ್ ನಿಂದ ಕಂಡೆಟ್ಟು, ಕುಲಶೇಕರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ.
ತುಂಬೆ ಪಣಂಬೂರು ಡೈರೆಕ್ಟ್ ಲೈನ್ ನಿಂದ ಮೂಡ ಪಂಪ್ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್ ಹೌಸ್, ಕೂಳೂರು ಪಂಪ್ ಹೌಸ್, ಕಾಪಿಕಾಡ್, ದಡ್ಡಲ್ ಕಾಡ್ ಪ್ರದೇಶ, ಬಂಗ್ರ ಕೂಳೂರು ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.
ಇನ್ನು ಕಟ್ಟಡ ರಚನೆ ಮತ್ತಿತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್‌ಗಳ ಜೋಡಣೆ ಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸುವುದು. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡು ವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸುವುದು ಎಂದು ಎಚ್ಚರಿಸಿದ್ದಾರೆ.