LATEST NEWS
ಕೊಡಗು ಜಿಲ್ಲೆ ಭೂಮಿ ಅಡಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವ ಶಬ್ದ ಮತ್ತೆ ಆತಂಕ
ಕೊಡಗು ಜಿಲ್ಲೆ ಭೂಮಿ ಅಡಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವ ಶಬ್ದ ಮತ್ತೆ ಆತಂಕ
ಮಂಗಳೂರು ಆಗಸ್ಟ್ 28: ಕೊಡಗು ಜಿಲ್ಲೆ ಹಾಗೂ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿ ಉಂಟಾದ ಭೀಕರ ಭೂಕುಸಿತದ ಘಟನೆ ಮಾಸುವ ಮುನ್ನವೇ ಮತ್ತೊಂದು ಆಪತ್ತು ಎದುರಾಗುವ ಸಾಧ್ಯತೆ ಈಗ ಸ್ಥಳೀಯ ನಿವಾಸಿಗಳನ್ನು ಆತಂಕಿತರನ್ನಾಗಿಸಿದೆ.
ಕೊಡಗು ಜಿಲ್ಲೆಯ ಗಡಿ ಬಾಗದ ಕೆಲ ಪ್ರದೇಶ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಳೂಕಿನ ಗಡಿಭಾಗದ ಕೆಲ ಪ್ರದೇಶಗಳಲ್ಲಿ ಭೂಮಿಯಡಿಯಿಂದ ರಭಸವಾಗಿ ನೀರು ಹರಿಯುತ್ತಿರುವ ನಿಗೂಢ ಶಬ್ದ ಕೇಳಿ ಬರುತ್ತಿದ್ದು ಇದು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ.
ಮಡಿಕೇರಿ ತಾಲೂಕಿನ ಕರಿಕೆ ಭಾಗ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಡತ್ತಿಕಾನ ನಿವಾಸಿ ಕೇಶವ ನಾಯ್ಕ ರವರ ಮನೆ ಬಳಿ ಈ ರೀತಿಯ ಸದ್ದು ಕೇಳಿ ಬಂದಿದೆ. ಭೂಮಿ ಅಡಿಯಿಂದ ಶಬ್ದ ಕೇಳಿಬರುತ್ತಿರುವ ಪ್ರದೇಶದ ಅಕ್ಕ ಪಕ್ಕದಲೆಲ್ಲೂ ನದಿ ,ತೊರೆ ಹಳ್ಳ ಗಳಿಲ್ಲ. ಆದರೂ ತೊರೆಯೊಂದು ತುಂಬಿ ಹರಿಯುವಂತಹ ಶಬ್ದ ಭೂಮಿಯ ಅಳ ದಿಂದ ಕೇಳಿ ಬರುತ್ತಿದೆ ಎನ್ನಲಾಗಿದೆ.
ಆಗಸ್ಟ್ 16 ಮತ್ತು 17 ರಂದು ಕೊಡಗಿನ ಗಡಿಭಾಗ ಜೋಡುಪಾಲ, ಮದೆನಾಡಿನಲ್ಲಿ ಜಲಸ್ಫೋಟ ಸೇರಿದಂತೆ ಭಾರೀ ಬೂ ಕುಸಿತ ಸಂಭವಿಸುವ ಮೊದಲು ಈದೆ ರೀತಿ ಶಬ್ದ ಕೇಳಿಬಂದಿತ್ತು. ಜೋಡುಪಾಲದ ನಿವಾಸಿ ಶಿಶಿರ ಈ ಹಿಂದೆ ನೀಡಿದ್ದ ಮಾಹಿತಿಯ ಪ್ರಕಾರ ದುರಂತ ಸಂಭವಿಸುವ ಮೊದಲು ಅ ಭಾಗದ ಭೂಮಿಯಡಿ ನೀರು ಹರಿಯುವ , ರೈಲು ಓಡಿದ ಭಾರೀ ಸದ್ದು ಕೇಳಿಬಂದಿತ್ತು.
ಇದೀಗ ಕರಿಕೆಯಲ್ಲೂ ಭೂಮಿಯ ಅಡಿಯಿಂದ ನೀರು ಹರಿಯುತ್ತಿರುವ ಶಬ್ದ ನಿರಂತರವಾಗಿ ಕೇಳಿ ಬರುತಿದ್ದು, ಅನಾಹುತ ಸೃಷ್ಟಿಸಬಹುದೇ ಎಂಬ ಅನುಮಾನ ಕರಿಕೆ , ಭಾಗಮಂಡಲದ ಜನರನ್ನು ಕಾಡಲಾರಂಭಿಸಿದೆ. ಭೂ ಕುಸಿತ ಉಂಟಾಗಬಹುದೆ ಎಂಬ ಭಯ ಅಕ್ಕಪಕ್ಕದ ಊರಿನವರದು. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.