Connect with us

    LATEST NEWS

    ಯೂಟ್ಯೂಬ್ ನೋಡಿ ಸ್ವತಃ ತಾನೇ ಹೆರಿಗೆ ಮಾಡಿಕೊಂಡ ಅಪ್ರಾಪ್ತೆ..!

    ಮಲಪ್ಪುರಂ, ಅಕ್ಟೋಬರ್ 28: ಯೂಟ್ಯೂಬ್ ಒಂದು ಅಂಗೈಯಲ್ಲಿನ ಪ್ರಪಂಚ. ಇಲ್ಲಿ ಎಲ್ಲ ರೀತಿಯ ಮಾಹಿತಿ, ಸಲಹೆಗಳು ಸಿಗುತ್ತವೆ. ಇದರಿಂದ ಸಹಾಯವಾಗಿರುವುದು ಉಂಟು, ತೊಂದರೆ ಸಂಭವಿಸಿರುವುದೂ ಉಂಟು. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು 17 ವರ್ಷದ ಯುವತಿಯೊಬ್ಬಳು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಸ್ವತಃ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬುದೇ ಸಮಾಧಾನಕರ ಸಂಗತಿ.

    ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿಯೇ ಅಕ್ಟೋಬರ್ 20ರಂದು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆರಿಗೆಯಾದ ನಂತರ, ಮೂರು ದಿನಗಳ ಕಾಲ ತನ್ನ ಕೋಣೆಯಲ್ಲಿಯೇ ಇದ್ದ ಆಕೆಗೆ ಕೆಲವು ಸೋಂಕುಗಳು ಕಾಣಿಸಿಕೊಂಡವು. ತರುವಾಯ, ಆಕೆಯ ತಾಯಿ ಅವಳನ್ನು ಆಸ್ಪತ್ರೆಗೆ ಸೇರಿಸಿದರು, ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

    ಹೆರಿಗೆಯ ಬಗ್ಗೆ ಆಸ್ಪತ್ರೆಯು ಮಾಹಿತಿ ನೀಡಿರುವುದರ ಜೊತೆಗೆ ಪೊಲೀಸರನ್ನು ಸಂಪರ್ಕಿಸಿರುವುದಾಗಿಯೂ ತಿಳಿಸಿದರು. ಇದೀಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಆಕೆಯ ನವಜಾತ ಗಂಡು ಮಗು ಜೊತೆ ತಾಯಿ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಮಲಪ್ಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ  ಅಧ್ಯಕ್ಷ ಅಡ್ವೊಕೇಟ್ ಶಾಜೇಶ್ ಭಾಸ್ಕರ್ ತಿಳಿಸಿದರು.

    ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಕೆಯು ಗರ್ಭಧರಿಸುವಂತೆ ಮಾಡಿದ ಆರೋಪದ ಮೇಲೆ ಅದೇ ಪ್ರದೇಶದ 21 ವರ್ಷದ ಯುವತಿಯ ಪ್ರಿಯತಮನನ್ನು ಪೋಸ್ಕೋ  ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *