Connect with us

    LATEST NEWS

    ಕೋಳಿ ಕಳ್ಳರಿದ್ದಾರೆ ಎಚ್ಚರಿಕೆ!!! ಭಿಕ್ಷುಕರ ನೆಪದಲ್ಲಿ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಳಿ ಕದಿಯುವ ಕಳ್ಳರನ್ನು ನೋಡಿದಿರಾ?

    ಕಾಪು, ಜನವರಿ 25: ಭಿಕ್ಷುಕರ ನೆಪದಲ್ಲಿ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಳಿ ಕದಿಯುವ ಕಳ್ಳರನ್ನು ನೋಡಿದಿರಾ? ಈ ಕೋಳಿ ಕದಿಯುವ ಖತರ್ನಾಕ್ ಸ್ಟೈಲ್ ಸದ್ಯ ವೈರಲ್ ಆಗುತ್ತಿದೆ!! ಉಡುಪಿ ಜಿಲ್ಲೆಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿ ಯಲ್ಲಿ ಕೋಳಿ ಕಳ್ಳತನ ನಡೆದಿದೆ.

    ವೃದ್ಧ ಜೋಡಿ ಮನೆಗೆ ಬಂದು, ಮನೆಯಲ್ಲಿ ಯಾರು ಇಲ್ಲ ಅನ್ನೋದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಮನೆಯಂಗಳದಲ್ಲಿ ಹಾಯಾಗಿ ಕುಳಿತುಕೊಳ್ತಾರೆ. ಮೊದಲು ಕೋಳಿಗಳಿಗೆ ಕಾಳು ಹಾಕುತ್ತಾರೆ. ಒಮ್ಮೆ ಈ ಕೋಳಿಗಳು ಇವರಿಗೆ ಹೊಂದಿಕೊಂಡರೆ ಮುಗೀತು…ಕೆಲವೇ ಕ್ಷಣದಲ್ಲಿ ಕಾಳು ಹಾಕಿದ ಕೈಯಿಂದಲೇ ಕೋಳಿಯ ಕತ್ತು ಹಿಸುಕುತ್ತಾರೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಕತ್ತು ಹಿಸುಕಿದ ಕೋಳಿಯನ್ನು ಜೋಳಿಗೆಯಲ್ಲಿ ತುಂಬಿಸಿಕೊಳ್ಳುತ್ತಾರೆ.

    ಈ ವಿಡಿಯೋ ನೋಡಿ…

    ಬೇಬಿ ಪೂಜಾರ್ತಿ ಎಂಬವರ ಮನೆಯಲ್ಲಿ ಈ ಈ ಚಾಲಕಿ ಕೃತ್ಯವನ್ನು ಮನೆಯ ಮಹಿಳೆಯೊಬ್ಬರು ಮೊಬೈಲ್ನಲ್ಲಿ ದಾಖಲಿಸಿಕೊಂಡಿದ್ದಾರೆ. ಈ ವೃದ್ಧ ಜೋಡಿಯನ್ನು ನೋಡಿ ಅಯ್ಯೋ ಪಾಪ …ಅನ್ನೋದರ ಬದಲು ಅಯ್ಯೋ ರಾಮ ಅನ್ನೂ ಸ್ಥಿತಿ ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply