Connect with us

    DAKSHINA KANNADA

    “ವಕ್ಪ್ ಪ್ರೀತಿ ತೋರಿ,ರೈತರು ,ಜನರನ್ನು ಬೀದಿಗೆ ತಂದು‌ ನಿಲ್ಲಿಸಿದೆ”; ಕಾಂಗ್ರೆಸ್ ಮೇಲೆ  ಶಾಸಕ ಭರತ್ ಶೆಟ್ಟಿ ವಾಗ್ದಾಳಿ

    ಸುರತ್ಕಲ್ : ವಕ್ಪ್ ಪ್ರೀತಿ ತೋರಿ,ರೈತರು ,ಜನರನ್ನು ಬೀದಿಗೆ ತಂದು‌ ನಿಲ್ಲಿಸಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಕಾಂಗ್ರೆಸ್ ಮೇಲೆ  ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ  ಭರತ್ ಶೆಟ್ಟಿ ಬ್ರಿಟೀಷರ ಕಾಲದಲ್ಲಿ ಆರಂಭವಾದ ವಕ್ಫ್ ಕಾಯಿದೆ ರದ್ದು ಮಾಡುವ ಬದಲು 1995ರ ವಕ್ಫ್‌ ಕಾಯಿದೆ ಮತ್ತು 2013 ರಲ್ಲಿ ಯುಪಿಎ ಸರ್ಕಾರ ಶಾಸನಾತ್ಮಕ ಅಧಿಕಾರ ನೀಡಿದ್ದರಿಂದ ಇಂದು ಜನರು,ರೈತರು ಬೀದಿಗೆ ಬೀಳುವಂತಾಗಿದೆ .ಲಕ್ಷ ಲಕ್ಷ ಎಕರೆ ಭೂಮಿಯನ್ನು ಲ್ಯಾಂಡ್ ಜಿಹಾದ್ ಮೂಲಕ ಕಬಳಿಸಲು ಕಾಂಗ್ರೆಸ್ ಕಾರಣ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ವಾಗ್ದಾಳಿ ನಡೆಸಿದ್ದಾರೆ.

    ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ವಕ್ಫ್‌ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡುವ ಹೊಸ ಕಾಯಿದೆಯನ್ನು ಅಂಗೀಕರಿಸಿದ್ದು ಹೇಗೆ,ಜನರನ್ನು ಕತ್ತಲಲ್ಲಿ ಇಟ್ಟು ವಕ್ಫ್‌ ಆಸ್ತಿ ಎಂದು ಗುರುತಿಸುವ ಗಣನೀಯ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಲಾಯಿತು. 2013ರಲ್ಲಿ ಈ ಕಾಯಿದೆಯನ್ನು ಪರಿಷ್ಕಾರ ಮಾಡಿದ್ದೀರಿ.
    ಈ ವಿಶೇಷ ಅಧಿಕಾರದಿಂದಾಗಿ ವಕ್ಫ್‌ ಯಾವುದಾದರೂ ಆಸ್ತಿಯನ್ನು ತನ್ನದು ಎಂದು ಅನ್ನಿಸಿದರೆ ಅಧಿಕೃತವಾಗಿ ವಕ್ಫ್‌ ಆಸ್ತಿ ಎಂದು ಘೋಷಿಸುವ ಅಧಿಕಾರ ನೀಡಿದ್ದೀರಿ.ಇದೇ ಕಾರಣದಿಂದ ಇಂದು ದೇಶದ ಮುಗ್ದ ರೈತರು,ಬಡ ಜನರು ಅತಂತ್ರರಾಗಿದ್ದಾರೆ. ವಕ್ಫ್‌ ಮಂಡಳಿಗಳು ಭ್ರಷ್ಟಾಚಾರ, ಭೂ ಅತಿಕ್ರಮಣ, ನಿಧಿಯ ದುರ್ಬಳಕೆ, ಅಧಿಕಾರದ ದುರುಪಯೋಗ ಮತ್ತು ಹಗರಣಗಳಿಗೆ ಕುಖ್ಯಾತಿ ಪಡೆದು, ಇದೀಗ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದು ಇದನ್ನು ತಡೆಯಲು ಕೇಂದ್ರದ ಬಿಜೆಪಿ ಸರಕಾರ ತರುವ ಕಾಯಿದೆಯನ್ನು ಜನರು ಪಕ್ಷ ಬೇಧ ಮರೆತು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷವು ಮಾಡಿದ ತಪ್ಪಿಗೆ ದೇಶದ ಜನರ ಅದರಲ್ಲೂ ಬಡ ವರ್ಗದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *