UDUPI
ವ್ಯೋಮಾ ಡ್ಯಾನ್ಸ್ ಅಕಾಡೆಮಿಯ ಅದ್ಧೂರಿ ಕಾರ್ಯಕ್ರಮ ನೃತ್ಯಂ-2023
ಉಡುಪಿ, ಮಾರ್ಚ್ 06: ಕಿನ್ನಿಮುಲ್ಕಿಯ ಹೃದಯ ಭಾಗದಲ್ಲಿರುವ ಗಣಪತಿ ಮೈದಾನದಲ್ಲಿ ಶನಿವಾರ ನಡೆದ ವ್ಯೋಮಾ ಡ್ಯಾನ್ಸ್ ಅಕಾಡೆಮಿ ಮಾಲಕರಾದ ಮತ್ತು ತರಬೇತುದಾರರಾದ ಅವಿನಾಶ್ ಬಂಗೇರಾ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ನೃತ್ಯ ಕಾರ್ಯಕ್ರಮವಾದ “ನೃತ್ಯಂ-2023” ಕಾರ್ಯಕ್ರಮವು ಅದ್ಧೂರಿಯಾಗಿ ಓಪನ್ ಚಾಂಪಿಯನ್‍ಶಿಪ್ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಇವರು ಉದ್ಘಾಟಿಸಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ನೃತ್ಯಕ್ಕೆ ಅದರದ್ದೇ ಆದ ಮಹತ್ವವಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಫೆಡರೇಶನ್‍ನ ಅಧ್ಯಕ್ಷರು, ಸಹಕಾರಿ ರತ್ನ ಶ್ರೀ ಯಶ್‍ಪಾಲ್ ಸುವರ್ಣ, ಉದ್ಯಮಿಗಳು, ಗುರ್ಮೆ ಫೌಂಡೇಶನ್ ಇದರ ಮುಖ್ಯ ಪ್ರವರ್ತಕರಾದ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜೇಷ್ಟ ಡೆವಲರ್ಸ್ ಇದರ ಮಾಲಕರಾದ ಶ್ರೀ ಯೋಗೀಶ್ ಪೂಜಾರಿ, ಶಟರ್‍ಬಾಕ್ಸ್ ಫಿಲಂಸ್‍ನ ಖ್ಯಾತ ಯ್ಯೂಟ್ಯೂಬರ್ ಸಚಿನ್ ಶೆಟ್ಟಿ, ಕಾಮಿಡಿ ಖಿಲಾಡಿ ಖ್ಯಾತಿಯ ಶ್ರೀ ರಾಕೇಶ್ ಮಲ್ಪೆ, ದೇಹಧಾಡ್ಯ ಪಟು ಉಮೇಶ್ ಮಟ್ಟು, ಸಂಸ್ಥೆಯ ಗೌರವಾಧ್ಯಕ್ಷಾರಾದ ಮಿಥುನ್ ಪಿ. ಶೆಟ್ಟಿ, ಹಿತೈಷಿಗಳಾದ ಸುಜಿತ್ ಗಾಣಿಗ, ಸಚಿನ್ ಸುವರ್ಣ ಪಿತ್ರೋಡಿ, ಉಪಸ್ಥಿತರಿದ್ದರು.
ಈ ನೃತ್ಯಂ-2023ರ ತೀರ್ಪುಗಾರರಾಗಿ ಪ್ರಖ್ಯಾತ ನೃತ್ಯಪಟುಗಳಾದ ಅಂತರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಪಡೆದ ಶ್ರೀ ಪ್ರಶಾಂತ್ ಶಿಂದೆ, ತಾರಕ್ ಕ್ಷೇವಿಯರ್ ಮತ್ತು ಪೂಜಾ ಸಚಿನ್ ಉಪಸ್ಥಿತರಿದ್ದರು. ನೃತ್ಯದಲ್ಲಿ ಭಾಗವಹಿಸಿದ ತಂಡಗಳಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದ ಗದಗದ ವೆಲ್‍ನೋನ್ ಸ್ಟ್ರೇರ್ಸ್ 50,000/- ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಮಣಿಪಾಲದ ಬ್ಲಿಟ್ಜ್ ಕ್ರೇಗ್ 25,000/-ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ಉಡುಪಿಯ ಫೈ ಫೈರ್ಸ್ ತಂಡ 15,000/- ಮತ್ತು ಟ್ರೋಫಿ ಪಡೆದು ವಿಜೇತರಾಗಿ ಹೊರ ಹೊಮ್ಮಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪ್ರಶಾಂತ್ ಶೆಟ್ಟಿ ಹಾವಂಜೆ, ಪ್ರಖ್ಯಾತ ಕಾರ್ಯಕ್ರಮ ನಿರೂಪಕ ಸಾಹಿಲ್ ರೈ ಇವರು ನಿರ್ವಹಿಸಿದರು. ಸಿನೇಮಾಟೋಗ್ರಫರ್ ಭುವನೇಶ್ ಪ್ರಭು ಹಿರೇಬೆಟ್ಟು ಇವರು ಸಹಕರಿಸಿದರು. ತಂಡದ ಸದಸ್ಯರಾದ ಮಮತಾ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು,