DAKSHINA KANNADA
ಕಡಬ – ಸಂಪೂರ್ಣ ಕೆಟ್ಟು ಹೋದ ರಸ್ತೆ – ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು…!!
ಕಡಬ ಎಪ್ರಿಲ್ 18: ನಡೆದಾಡಲು ಸಹ ಆಗದ ಸ್ಥಿತಿಗೆ ತಲುಪಿರುವ ರಸ್ತೆ ಸರಿಪಡಿಸಲು ಆಗ್ರಹಿಸಿ ಕಂದ್ಗಾಜೆ, ನಗ್ರಿ ,ಶರವೂರಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ಕಡಬ ತಾಲೂಕು ಅಲಂಕಾರು ಗ್ರಾಮ &ಗ್ರಾಮ ಪಂಚಾಯತ್ ಬುಡರಿಯ ಕ್ರಾಸ್ ನಿಂದ ಶರವೂರು, ನಗ್ರಿ, ಕಕ್ಕೇವೆ ರೋಡ್ ಡಮಾರು ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಸುಮಾರು 30ವರ್ಷ ದಾಮರು ಕಾಣದೆ ಹೋಗಿದೆ. ಈ ಪರಿಸರದಲ್ಲಿ ಸುಮಾರು 250ಕ್ಕೂ ಹೆಚ್ಚು ಮನೆ , ಪೋಸ್ಟ್ ಆಫೀಸ್, 2 ಅಂಗನವಾಡಿ ಕೇಂದ್ರ 2 sc/st ಕಾಲೋನಿ 1 ಸರಕಾರಿ ಶಾಲೆ ಇದೆ. ಅಲ್ಲದೆ ಇಲ್ಲಿನ ಜನರು ತಮ್ಮ ಮೂಲಭೂತ ಅವಶ್ಯಕತೆಗಳಿಗೆ ಅಲಂಕಾರು ಪೇಟೆಯನ್ನು ಅವಲಂಭಿಸಿದ್ದಾರೆ.
ಆದರೆ ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಡೆದಾಡಲು ಸಹ ಕಷ್ಟ ಪಡಬೇಕಾದ ಪರಿಸ್ಥಿತಿಯಲ್ಲಿ ಇದೆ. ಗ್ರಾಮಸ್ಥರು ರಸ್ತೆ ದುರಸ್ಥಿ ಮಾಡಲು ಕಳೆದ 30 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ , ಈ ಹಿನ್ನಲೆ ಸದ್ಯದಲ್ಲೇ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದು, ರಸ್ತೆ ದುರಸ್ಥಿ ಮಾಡದೇ ಯಾವುದೇ ಕಾರಣಕ್ಕೂ ಮತದಾನ ಮಾಡವುದಿಲ್ಲ ಎಂದು ನಿರ್ಧರಿಸಿದ್ದಾರೆ. ಸರಕಾರ ಎಚ್ಚೆತ್ತು ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.