- ವಿಟ್ಲ ಅಗಸ್ಟ್ 2: ವಿಟ್ಲ ಅರಮನೆಯ ಅರಸು ವಿಟ್ಲದ ರಾಜಮನೆತನದ ಹಿರಿಯರು ಆದ ಜನಾರ್ದನ ವರ್ಮ ಅರಸರು (84) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಜನಾರ್ದನ ವರ್ಮ ಅರಸರು ಅವರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ನಂತರ ಅರಸು ಮನೆತನದ ವಿಧಿ ವಿಧಾನಗಳ ಮೂಲಕ ಬಾಕಿಮಾರು ಗದ್ದೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸೋಮವಾರ ಸಾಯಂಕಾಲ 4 ಗಂಟೆಯ ನಂತರ ವಿಟ್ಲ ವರ್ತಕರ ಸಂಘದ ವತಿಯಿಂದ ವಿಟ್ಲ ಪೇಟೆ ಬಂದ್ ನಡೆಯಲಿದ್ದು, ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ 4.30ಕ್ಕೆ ಸಂತಾಪ ಸೂಚಕ ಸಭೆ ನಡೆಯಲಿದೆ.