Connect with us

    BANTWAL

    ವಿಟ್ಲ: ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು

    ವಿಟ್ಲ, ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಬೈಕ್ ಸ್ಕಿಡ್ ಆಗಿ ಸವಾರರೊಬ್ಬರು ಮೃತಪಟ್ಟಂತಹ ಘಟನೆ ನಡೆದಿದೆ.

    ವಿಟ್ಲದ ಅನ್ನಪೂರ್ಣ ಟ್ರಾವೆಲ್ಸ್‌ನ ಮಾಲಕ ಕಾಶಿ ಮಠ ಸತ್ಯನಾರಾಯಣ ಭಟ್ (54) ಅವರು ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದಾರೆ. ಮೃತ ಸತ್ಯನಾರಾಯಣ ಭಟ್ ರವರು ಕನ್ಯಾನದಿಂದ ವಿಟ್ಲ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗು ಮಗಳನ್ನು ಅಗಲಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply