DAKSHINA KANNADA
ವಿಟ್ಲ – ಮಹಿಳೆಯನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ

ಪುತ್ತೂರು ಡಿಸೆಂಬರ್ 25: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದ ಘಟನೆ ವಿಟ್ಲದ ಕಾನತ್ತಡ್ಕದಲ್ಲಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ದೊರೋಡೆ ಪ್ರಕರಣಗಳು ಏರಿಕೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂಶಯ ಮೂಡಲಾರಂಭಿಸಿದೆ.
ಕಾನತ್ತಡ್ಕ ಜುಮಾ ಮಸೀದಿ ಮುಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿರುವ ಆಟೋ ಚಾಲಕ ರಫೀಕ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಇಂದು ರಫೀಕ್ ತಮ್ಮ ಮಗನೊಂದಿಗೆ ನಮಾಜ್ ಗೆ ಮಸೀದಿಗೆ ತೆರಳಿದ್ದರು. ಈ ಸಂದರ್ಭ ಅವರ ಪತ್ನಿ ಜೈನಾಬ ಅವರು ಒಬ್ಬರೇ ಮನೆಯಲ್ಲಿದ್ದು, ಇದರ ಮಾಹಿತಿ ಪಡೆದ ದರೋಡೆಕೋರ ಮಹಿಳೆಯ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾನೆ. ಇವರ ಸುತ್ತಲೂ ಮನೆಗಳಿದ್ದು ಈ ಘಟನೆ ಯಾರ ಗಮನಕ್ಕೂ ಬಂದಿಲ್ಲ. ಪತಿ ಮಸೀದಿಯಿಂದ ವಾಪಾಸ್ಸಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
