DAKSHINA KANNADA
ವಿಟ್ಲ- ಟಿವಿ ಜಾಸ್ತಿ ನೋಡಬೇಡ ಎಂದಿದ್ದಕ್ಕೆ 14 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ ಮೇ 08: ಟಿವಿ ಜಾಸ್ತಿ ನೋಡಬೇಡ ಎಂದಿದ್ದಕ್ಕೆ 14 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟ ವಿಟ್ಲ ಪುಚ್ಚೆಗುತ್ತು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕ ನನ್ನು ಪುಚ್ಚೆಗುತ್ತು ಜೋಗಿಬೆಟ್ಟು ವಾಮನ ಪೂಜಾರಿ ಅವರ ಪುತ್ರ ಉಜ್ವಲ್ (14) ಎಂದು ಗುರುತಿಸಲಾಗಿದೆ. ಉಜ್ವಲ್ ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿ ಎನ್ನಲಾಗಿದೆ. ಪೋಷಕರು ಹೆಚ್ಚು ಟಿವಿ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಾರೆ. ಇದರಿಂದ ನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಭೇಟಿ ನೀಡಿದ್ದಾರೆ.
