DAKSHINA KANNADA
ವಿಟ್ಲ – ಚಾಲಕನ ನಿಯಂತ್ರಣ ತಪ್ಪಿ ಕಲ್ಲಿಗೆ ಗುದ್ದಿದ ಬಸ್ – ಯುವತಿಗೆ ಗಂಭೀರ ಗಾಯ

ವಿಟ್ಲ ಫೆಬ್ರವರಿ 11: ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಬೃಹತ್ ಬಂಡೆಗೆ ಬಸ್ ಗುದ್ದಿದ ಪರಿಣಾಮ ಓರ್ವ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ನಡೆದಿದೆ.
ವಿಟ್ಲದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸೆಲಿನಾ ಬಸ್ ಅಪಘಾತಗೊಂಡಿರುವುದು.ಬಸ್ ಗುದ್ದಿದ್ದ ಸಂದರ್ಭದಲ್ಲಿ ಬಸ್ ನ ಮುಂಭಾಗದ ಗಾಜು ಒಡೆದು ಯುವತಿ ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ.ಯುವತಿಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಉಳಿದಂತೆ ಅನೇಕ ಪ್ರಯಾಣಿಕರಿಗೂ ಗಾಯವಾಗಿದೆ. ಸ್ಥಳಕ್ಕೆ ವಿಟ್ಲ ಪೋಲೀಸರು ಬೇಟಿ ನೀಡಿದ್ದಾರೆ
