Connect with us

BANTWAL

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ತುಂಬಿದ ಲಾರಿ ಪಲ್ಟಿ

ವಿಟ್ಲ, ಜೂನ್ 27: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ಸಾಗಾಟದ ಲಾರಿಯೊಂದು ಮಗುಚಿ ಬಿದ್ದ ಘಟನೆ ಬಂಟ್ವಾಳ ತಾಲ್ಲೂಕಿನ ವಿಟ್ಲ – ಕಾಸರಗೋಡು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಕಲ್ಲು ತುಂಬಿದ್ದ ಲಾರಿಯನ್ನು ರಸ್ತೆಯ ಬದಿ ನಿಲ್ಲಿಸಿ ಚಾಲಕ ಚಹಾ ಕುಡಿಯಲು ತೆರಳಿದ ವೇಳೆ ಈ ಘಟನೆ ನಡೆದಿದೆ. ಅಪಘಾತದಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಇನ್ನು ಮಳೆಗಾಲದ ಈ ಸಂದರ್ಭ ರಸ್ತೆಬದಿಯ ಮಣ್ಣು ಸಡಿಲಗೊಂಡಿದ್ದು, ಇದೇ ಜಾಗದಲ್ಲಿ ಕಲ್ಲು ತುಂಬಿದ ಲಾರಿ ನಿಂತ ಹಿನ್ನೆಲೆಯಲ್ಲಿ ಮಣ್ಣು ಕುಸಿದು, ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ‌.

Share Information
Continue Reading
Advertisement
Click to comment

Leave a Reply

Your email address will not be published. Required fields are marked *