Connect with us

DAKSHINA KANNADA

ಸೆ. 19 ಗಣೇಶ್ ಚತುರ್ಥಿಗೆ ಸಾರ್ವರ್ತ್ರಿಕ ರಜೆ ಘೋಷಣೆಗೆ ವಿಶ್ವ ಹಿಂದೂ ಪರಿಷದ್ ಆಗ್ರಹ..!

ಹಿಂದುಗಳ ಅತ್ಯಂತ ಪ್ರಮುಖ ಹಬ್ಬ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಸೆಪ್ಟೆಂಬರ್ 19 ರಂದು ನೀಡಬೇಕೆಂದು ವಿಶ್ವ ಹಿಂದೂ ಪರಿಷದ್ ಸರ್ಕಾರವನ್ನು ಆಗ್ರಹಿಸಿದೆ.

ಮಂಗಳೂರು : ಹಿಂದುಗಳ ಅತ್ಯಂತ ಪ್ರಮುಖ ಹಬ್ಬ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಸೆಪ್ಟೆಂಬರ್ 19 ರಂದು ನೀಡಬೇಕೆಂದು ವಿಶ್ವ ಹಿಂದೂ ಪರಿಷದ್ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಭೇಟಿಉ ಮಾಡಿದ ನಿಯೋಗ ಮನವಿ ಆರ್ಪಿಸಿದೆ.

ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆಪ್ಟೆಂಬರ್ 18 ರಂದು ರಜೆ ಘೋಷಿಸಿದ್ದು, ಗಣೇಶ ಚತುರ್ಥಿ ಹಬ್ಬ ಸೆಪ್ಟೆಂಬರ್ 19 ರಂದು ಆಚರಿಸಲಿರುವ ಕಾರಣ ಅದೇ ದಿನ ರಜೆಯನ್ನು ನೀಡಬೇಕೆಂದು ಮನವಿ ಮಾಡಿದೆ.

ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿಗಳಾದ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಜಿಲ್ಲಾಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ್ ನವೀನ ಮೂಡುಶೆಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಣೇಶ ಚತುರ್ಥಿ ಹಬ್ಬ ಇಡೀ ವಿಶ್ವದ ಹಿಂದುಗಳಿಗೆ ಅತ್ಯಂತ ಸಡಗರದ ಹಬ್ಬ, ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ದಿನ ಇಡೀ ಹಿಂದೂ ಸಮಾಜ ವಿಘ್ನವಿನಾಶಕ ಗಣೇಶನ ಹಬ್ಬವನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿದೆ.

ಈ ವರ್ಷ ಶೋಭನ ನಾಮ ಸಂವತ್ಸರದಲ್ಲಿ ಅಂದರೆ 2023 ರಲ್ಲಿ ಗಣೇಶಚತುರ್ಥಿ ತಾರೀಕು ಸೆಪ್ಟೆಂಬರ್ 19 2023 ಮಂಗಳವಾರ ಆಚರಣೆ ನಡೆಯಲಿದ್ದು. ಆದರೆ ಸರಕಾರಿ ರಜೆಯ ಪಟ್ಟಿಯಲ್ಲಿ ತಾರೀಕು ಸೆಪ್ಟೆಂಬರ್ 18 2023 ಸೋಮವಾರ ರಜೆ ಇರುವುದು ನಮ್ಮ ಗಮನಕ್ಕೆ ಬಂದಿರುತ್ತದೆ

ಹಾಗಾಗಿ ತಾವುಗಳು ರಜೆಯನ್ನು ಬದಲಾವಣೆ ಮಾಡಿ ಗಣೇಶಚತುರ್ಥಿ ದಿನ ಅಂದರೆ ತಾರೀಕು ಸೆಪ್ಟೆಂಬರ್ 19 2023 ಮಂಗಳವಾರ ಸರಕಾರಿ ರಜೆಯನ್ನು ನೀಡುವಂತೆ ಕ್ರಮಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರವನ್ನು ವಿಹೆಚ್‌ಪಿ ನಿಯೋಗ ಆಗ್ರಹಿಸಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *