LATEST NEWS
‘ಪೊಲೀಸ್ ಇಲಾಖೆ ಕಾಂಗ್ರೆಸ್ ಪಕ್ಷದ ಕೈ ಗೊಂಬೆ ರೀತಿಯಲ್ಲಿ ವರ್ತಿಸುತ್ತಿದೆ’; ವಿಶ್ವ ಹಿಂದೂ ಪರಿಷತ್ ಆಕ್ರೋಶ
ಮಂಗಳೂರು : ದೇಶದ್ರೋಹಿ ಹೇಳಿಕೆ ನೀಡಿದ ಐವನ್ ಡಿಸೋಜಾ ಮೇಲೆ ದೂರು ಕೊಟ್ಟರೂ ಇನ್ನು ಕೇಸು ದಾಖಲಿಸದ ಪೊಲೀಸ್ ನಿಲುವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ,ರಾಷ್ಟ್ರವಿರೋಧಿ ನಡೆಯ ವಿರುದ್ಧ ಧ್ವನಿ ಎತ್ತಿದರೆ ನನ್ನ ಮೇಲೆ ಬಿಜೆಪಿ ಶಾಸಕರ ಕೇಸು ದಾಖಲು ಮಾಡುತ್ತಾರೆ. ಆದ್ರೆ ದೇಶದ್ರೋಹಿ ಹೇಳಿಕೆ ನೀಡಿದ ಐವನ್ ಡಿಸೋಜಾ ಮೇಲೆ ದೂರು ಕೊಟ್ಟರೂ ಇನ್ನೂ ಕೇಸು ದಾಖಲಿಸದ ಪೊಲೀಸ್ ನಿಲುವನ್ನು ಖಂಡಿಸುತ್ತೇವೆ.
ಪೊಲೀಸ್ ಇಲಾಖೆಯ ಈ ದಂದ್ವ ನಿಲುವನ್ನು ಖಂಡಿಸುತ್ತೆವೆ .ಪೊಲೀಸ್ ಇಲಾಖೆ ಕಾಂಗ್ರೆಸ್ ಪಕ್ಷದ ಕೈ ಗೊಂಬೆ ರೀತಿಯಲ್ಲಿ ವರ್ತಿಸುತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.