LATEST NEWS
ಪೊಲೀಸ್ ಇಲಾಖೆ ಗೋಹ*ತ್ಯೆ ಮಟ್ಟಹಾಕದಿದ್ದರೆ ಉಗ್ರ ಪ್ರತಿಭಟನೆ – ವಿಶ್ವಹಿಂದೂ ಪರಿಷತ್

ಮಂಗಳೂರು ಮಾರ್ಚ್ 26: ಜಿಲ್ಲೆಯಲ್ಲಿ ಪ್ರತಿದಿನ ಕಾನೂನೂ ಮೀರಿ ಗೋವುಗಳ ಹಿಂಸಾತ್ಮಕ ಸಾಗಾಟ ಮತ್ತು ಗೋಹತ್ಯೆ ನಡೆಯುತ್ತಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಗೊರಕ್ಷಾ ಪ್ರಮುಖ ಸುನೀಲ್ ಕೆ.ಆರ್. ಕಳೆದ 2 ವಾರಗಳಿಂದ 4 ಕಡೆ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ, ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲಿಸರು ವಾಹನಗಳನ್ನು ತಡೆದು ಅಂದಾಜು ಒಂದು ಟನ್ ಗೂ ಅಧಿಕ ಅಕ್ರಮ ಗೋಮಾಂಸ ಪೊಲೀಸರು ವಶಪಡಿಸುವ ಉತ್ತಮ ಕಾರ್ಯ ಮಾಡಿದರೂ ಅಪರಾಧಿಗಳನ್ನು ಬಂಧಿಸುವ ಹಾಗೂ ಇನ್ನಿತರ ಮುಂದಿನ ಕ್ರಮಗಳನ್ನು ಜರಗಿಸಿಲ್ಲ.

ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಅವ್ಯಾತವಾಗಿ ನಡೆಯುತ್ತಿದ್ದು ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ ಮತ್ತು ಫರಂಗಿಪೇಟೆ, ಸೂರಲ್ಪಾಡಿ, ಹಂಡೇಲು, ಕಾರ್ನಾಡು ಈ ಜಾಗಗಳಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಹೇಳಿದರು. ಗೋ ಹತ್ಯೆ ಅಕ್ರಮ ಗೋಸಾಗಾಟದ ಬಗ್ಗೆ ಸಂಘಟಿತವಾಗಿ ಕಾರ್ಯಾಚರಿಸುತ್ತಿರುವ ಗೋಮಾಂಸ ಮಾಫಿಯವನ್ನು ಮಟ್ಟ ಹಾಕಿ ಈ ಕೆಳಗಿನ ಕ್ರಮ ಕೈಗೊಳ್ಳಲು ನಮ್ಮ ಬೇಡಿಕೆ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸುತ್ತಾ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.