LATEST NEWS
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು
ನವದೆಹಲಿ ಜನವರಿ 24: ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ವರದಿಯೊಂದರ ಪ್ರಕಾರ, ಸೆಹ್ವಾಗ್ ಅವರಿಗೆ ಪತ್ನಿ ಆರತಿ ವಿಚ್ಛೇದನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ಕ್ರಿಕೆಟ್ ತಂಡದ ಅತ್ಯಂತ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಅವರು 2004ರಲ್ಲಿಆರತಿ ಅಹ್ಲಾವತ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ 2007ರಲ್ಲಿ ಆರ್ಯವೀರ್ ಮತ್ತು 2010ರಲ್ಲಿ ವೇದಾಂತ್ ಎಂಬ ಇಬ್ಬರು ಗಂಡುಮಕ್ಕಳು ಜನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ನಿ ಆರತಿ ತಮ್ಮ ಪ್ರೊಫೈಲ್‌ನಲ್ಲಿ ಯಾವುದೇ ಹೊಸ ಫೋಟೊಗಳನ್ನು ಹಂಚಿಕೊಂಡಿಲ್ಲ. ಬದಲಿಗೆ ದಂಪತಿಯ ಹಳೆಯ ಫೋಟೊಗಳು ಮಾತ್ರ ಇವೆ. ಇನ್‌ಸ್ಟಾಗ್ರಾಂನಲ್ಲಿ ಮಾಜಿ ಕ್ರಿಕೆಟಿಗ ಆರತಿ ಅವರನ್ನು ಫಾಲೋ ಮಾಡುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ದಂಪತಿ ನಡುವೆ ಏನೋ ಸರಿಯಾಗಿಲ್ಲ ಎನ್ನುವ ಊಹಾಪೋಹಗಳಿಗೆ ತುಪ್ಪ ಸುರಿದಿದೆ.