Connect with us

LATEST NEWS

ರೋಹಿತ್ ಬಳಿಕ ನಿವೃತ್ತಿ ನೀಡಲು ಮುಂದಾದ ವಿರಾಟ್ ಕೊಹ್ಲಿ

ಬೆಂಗಳೂರು ಮೇ. 10: ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಕೆಲವು ದಿನಗಳ ಹಿಂದೆ ಅಚ್ಚರಿ ಎಂಬಂತೆ ನಿವೃತ್ತಿ ಘೋಷಿಸಿದ್ದರು.ಈಗ ಟೀಮ್ ಇಂಡಿಯಾದ ಮತ್ತೋರ್ವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ವಿರಾಟ್ ಟೆಸ್ಟ್‌ನಿಂದ ನಿವೃತ್ತಿ ಹೊಂದಲು ಬಯಸಿದ್ದಾರೆ. ಆದರೆ ಈ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಬಿಸಿಸಿಐ ಅವರನ್ನು ಕೇಳಿದೆ ಎಂದು ಹೇಳಲಾಗಿದೆ. ಇಬ್ಬರೂ ಆಟಗಾರರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಒಟ್ಟಿಗೆ ನಿವೃತ್ತರಾಗಿದ್ದರು.

ಆಸ್ಟ್ರೇಲಿಯಾ ಪ್ರವಾಸದ ಬಳಿಕ ನಿವೃತ್ತಿ ಬಗ್ಗೆ ಯೋಚನೆ: ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐದು ಟೆಸ್ಟ್‌ಗಳ ಸರಣಿಗೆ ತಂಡವನ್ನು ಆಯ್ಕೆ ಮಾಡಲು ಆಯ್ಕೆದಾರರು ಶೀಘ್ರದಲ್ಲೇ ಸಭೆ ಸೇರಲಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಆ ಸರಣಿಯ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ನಂತರ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಸದ್ಯ ಕೊಹ್ಲಿ ನಿವೃತ್ತಿ ವಿಚಾರದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸದಿದ್ದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕವು ಸಾಕಷ್ಟು ಅನನುಭವಿಗಳಿಂದ ಕೂಡಿರುವುದು ಖಚಿತ.

2014 ರ ಕೊನೆಯಲ್ಲಿ ವಿರಾಟ್ ಕೊಹ್ಲಿ ಭಾರತೀಯ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡರು. ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ನಂತರ ಅವರನ್ನು ಭಾರತದ ನಾಯಕರನ್ನಾಗಿ ಮಾಡಲಾಯಿತು. 2022 ರ ಆರಂಭದಲ್ಲಿ, ವಿರಾಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಅದಾದ ನಂತರ, ಬಿಸಿಸಿಐ ಈ ಜವಾಬ್ದಾರಿಯನ್ನು ಅವರಿಗಿಂತ ಹಿರಿಯರಾದ ರೋಹಿತ್ ಶರ್ಮಾ ಅವರಿಗೆ ವಹಿಸಿತು. ವಿರಾಟ್ ಟೆಸ್ಟ್ ನಿಂದ ನಿವೃತ್ತರಾದರೆ, ಟೀಮ್ ಇಂಡಿಯಾಗೆ ಇಂಗ್ಲೆಂಡ್ ಟೆಸ್ಟ್​ಗೆ ಇಬ್ಬರು ಅತ್ಯಂತ ಅನುಭವಿ ಆಟಗಾರರ ಮಾರ್ಗದರ್ಶನ ಸಿಗುವುದಿಲ್ಲ.

ಮೂಲಗಳ ಪ್ರಕಾರ, ಕೊಹ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಬಿಸಿಸಿಐ ಬಯಸಿದೆ. ಮಂಡಳಿಯ ಮನವಿಗೆ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ. “ಅವರು ಈಗಾಗಲೇ ನಿರ್ಧರಿಸಿದ್ದಾರೆ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಮಂಡಳಿಗೆ ತಿಳಿಸಿದ್ದಾರೆ” ಎಂದು ಮೂಲಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ನಿರ್ಣಾಯಕ ಇಂಗ್ಲೆಂಡ್ ಪ್ರವಾಸ ಬರುತ್ತಿರುವುದರಿಂದ ಮತ್ತೊಮ್ಮೆ ಯೋಚಿಸುವಂತೆ ಬಿಸಿಸಿಐ ಅವರನ್ನು ಒತ್ತಾಯಿಸಿದೆ. ಆದರೆ, ಅವರು ಇನ್ನೂ ಮನವಿಗೆ ಸ್ಪಂದಿಸಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.

36 ವರ್ಷದ ವಿರಾಟ್ ಕೊಹ್ಲಿ ಭಾರತ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 46.85 ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಸರಾಸರಿ ಕುಸಿದಿದೆ. ಈ ಅವಧಿಯಲ್ಲಿ, ಅವರು 37 ಪಂದ್ಯಗಳಲ್ಲಿ ಮೂರು ಶತಕಗಳು ಸೇರಿದಂತೆ 1990 ರನ್ ಗಳಿಸಿದ್ದಾರಷ್ಟೆ. 2019ರ ಅಂತ್ಯದ ವೇಳೆಗೆ ಅವರ ಟೆಸ್ಟ್ ಸರಾಸರಿ 55 ರ ಆಸುಪಾಸಿನಲ್ಲಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಐದು ಟೆಸ್ಟ್ ಪಂದ್ಯಗಳಲ್ಲಿ 23.75ರ ಸರಾಸರಿಯಲ್ಲಿ ಸ್ಕೋರ್ ಗಳಿಸಿದರು. ಆ ಪ್ರವಾಸದಲ್ಲಿ ಅವರು ಎಂಟು ಬಾರಿ ಔಟಾಗಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *