FILM
Viral Video: ಮೊದಲ ಮಗು ಕ್ರಿಶ್ಚಿಯನ್, ಎರಡನೇ ಮಗು ಮುಸ್ಲಿಂ, ಮೂರನೇ ಮಗು ಹಿಂದೂ…ಕೃಷ್ಣಾ ಎಂದಾಗ ಕಣ್ಣೀರಾದ ಬಾಲಕಿಯರು…!!
ಕೇರಳ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದ್ದು, ಕೇರಳದ ವಿವಿಧ ಚಾನೆಲ್ ಗಳಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಹಾಡಿದ ಪುಟ್ಟ ಬಾಲಕಿಯರು ಶ್ರೀ ಕೃಷ್ಣನ ಹೆಸರು ಬಂದಾಗ ಭಾವುಕರಾದ ಘಟನೆ ನಡೆದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರೊಬ್ಬರು ಈ ಮೂರು ಚಾನೆಲ್ ಗಳಲ್ಲಿನ ಹಾಡುಗಳನ್ನು ಎಡಿಟಿಂಗ್ ಮಾಡಿ ಪೋಸ್ಟ್ ಮಾಡಿದ್ದು, ಕಣ್ಣೀರು ತರಿಸುವಂತಿದೆ.
ಒಂದೇ ಒಂದು ಪದ್ಯ. ಮೊದಲ ಗಾಯಕಿ ಕ್ರಿಶ್ಚಿಯನ್, ಎರಡನೇ ಮುಸ್ಲಿಂ ಮತ್ತು ಮೂರನೇ ಹಿಂದೂ. ಮೂವರೂ ಬೇರೆ ಬೇರೆ ವಾಹಿನಿಗಳಲ್ಲಿ ಹಾಡುತ್ತಿದ್ದಾರೆ ಆದರೆ ಮೂವರಿಗೂ ಭಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಶ್ರೀಕೃಷ್ಣನ ಹೆಸರು ಬಂದಾಗ ಮೂವರೂ ಭಾವುಕರಾಗಿ ಅಳಲು ಪ್ರಾರಂಭಿಸುತ್ತಾರೆ. ಸಹಜವಾಗಿ, ಪ್ರತಿಯೊಂದು ಜೀವಿಯು ಆತ್ಮಕ್ಕಿಂತ ಹೆಚ್ಚು ಶಾಶ್ವತವಾಗಿದೆ, ಅದು ಹೊರಗಿನ ಧಾರ್ಮಿಕ ಮುಸುಕಿನಿಂದ ಮುಚ್ಚಲ್ಪಟ್ಟಿದೆ, ಆದರೆ ಆ ಮುಸುಕನ್ನು ತೆಗೆದುಹಾಕಿದಾಗ ಮತ್ತು ಶುದ್ಧವಾದ, ಕ್ರಿಯಾತ್ಮಕವಾದ ಆತ್ಮದ ಅಂಶವು ಬಹಿರಂಗವಾದಾಗ, ಆಗ ಶಾಶ್ವತವು ಎಲ್ಲೆಡೆ ಕಂಡುಬರುತ್ತದೆ ಎಂದು ಈ ವಿಡಿಯೋ ಜೊತೆ ಬರೆಯಲಾಗಿದೆ.
ಇಷ್ಟು ಪುಟ್ಟ ವಯಸ್ಸಿನಲ್ಲಿ ಎಲ್ಲ ಸ್ಥಾಯಿಗಳಲ್ಲೂ ಇಷ್ಟೊಂದು ಶ್ರುತಿ, ಲಯ, ಭಾವಪೂರ್ಣವಾಗಿ ಹಾಡುವುದನ್ನು ಕೇಳಿದಾಗ ಮೈನವಿರೇಳದೇ ಇರದು. ಆದರೆ, ತಾಂತ್ರಿಕವಾಗಿ ಗಮನಿಸಿದಾಗ, ಯಾವ ಶ್ರುತಿಯಿಂದ ಹಾಡನ್ನು ಆರಂಭಿಸಿದ್ದರೋ ಅದೇ ಶ್ರುತಿಗೆ ಮರಳುವಲ್ಲಿ ಮೂವರು ಮಕ್ಕಳಿಗೂ ಗೊಂದಲವಾಗಿದೆ, ಶ್ರುತಿ ತಪ್ಪಿದೆ. ಆ ಅಳುಕು, ಆತಂಕ ಬಿಕ್ಕುವಂತೆ ಮಾಡಿದೆ. ಏಕೆಂದರೆ ಇದು ಕಷ್ಟಕರವಾದ ಸಂಯೋಜನೆ. ಆದರೆ ಒಟ್ಟಾರೆಯಾಗಿ ಹಾಡನ್ನು ಕೇಳಿದಾಗ ಎಲ್ಲ ತಾಂತ್ರಿಕಾಂಶಗಳನ್ನು ಬಿಟ್ಟು ಭಾವವೊಂದೇ ಅನುರಣಿಸುತ್ತದೆ. ಈ ಮೂಲಕ ಕೇಳುಗರನ್ನು ಇದು ಹಿಡಿದಿಡುತ್ತದೆ.
ಕಲೆಗೆ ಯಾವ ಧರ್ಮ? ಅದು ಪ್ರತಿಯೊಬ್ಬರನ್ನೂ ಒಳಗೊಳ್ಳಲಿ. ಒಳಗೊಳ್ಳುವಂಥ ಅವಕಾಶಗಳು ಎಲ್ಲರಿಗೂ ಸಿಗಲಿ. ಅಲ್ಲಿ ಖಂಡಿತ ದೇವರು ನೆಲೆಗೊಳ್ಳುತ್ತಾನೆ. ದೇವರು ನೆಲೆಗೊಂಡಲ್ಲಿ ಹೃದಯವೇ ಆದ್ಯ. ಇದಕ್ಕೆ ಈ ಮೂವರು ಮಕ್ಕಳೇ ಸಾಕ್ಷಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?