Connect with us

LATEST NEWS

ಔರಂಗಜೇಬ್ ಸಮಾಧಿ ವಿಚಾರಕ್ಕೆ ಹಿಂಸಾಚಾರ: ನಾಗ್ಪುರದಲ್ಲಿ ಕರ್ಪ್ಯೂ ಜಾರಿ

ನಾಗ್ಪುರ, ಮಾರ್ಚ್ 18: ಔರಂಗಜೇಬ್ ಸಮಾಧಿ ವಿವಾದ ಘರ್ಷಣೆಗೆ ಕಾರಣವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಹಿಂಸಾಚಾರ ನಡೆದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಪ್ರದೇಶಗಳಲ್ಲಿ ಕರ್ಪ್ಯೂ ವಿಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ, ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವ ಬೇಡಿಕೆಗೆ ಸಂಬಂಧಿಸಿದ ಹೆಚ್ಚುತ್ತಿರುವ ನಾಗುರದಲ್ಲಿ ಉದ್ವಿಗ್ನತೆಯ ನಡುವೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) ನ ಸೆಕ್ಷನ್ 163 ರ ಅಡಿಯಲ್ಲಿ ನಾಗ್ಪುರ ನಗರದ ಹಲವಾರು ಭಾಗಗಳಲ್ಲಿ ಕರ್ಪೂ ಜಾರಿಗೊಳಿಸಲಾಗಿದೆ
ಎಂದು ಮಹಾರಾಷ್ಟ್ರ ಪೊಲೀಸರ ಅಧಿಕೃತ ಅಧಿಸೂಚನೆ ತಿಳಿಸಿದೆ.

ನಾಗ್ಪುರ ಪೊಲೀಸ್ ಆಯುಕ್ತ ರವೀಂದರ್ ಕುಮಾರ್ ಸಿಂಗಲ್ ಹೊರಡಿಸಿದ ಆದೇಶದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂದಿನ ಸೂಚನೆ ಬರುವವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ಕೊತ್ವಾಲಿ, ಗಣೇಶಪೇಠ, ತಹಸಿಲ್, ಲಕದಂಜ್, ಪಚ್ಛಾವೋಲಿ, ಶಾಂತಿನಗರ, ಸಕ್ಕರ್ದಾರ, ನಂದನ್ವನ್, ಇಮಾಮ್ಯಾಡ, ಯಶೋಧರನಗರ ಮತ್ತು ಕಪಿಲಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಪ್ಯೂಅನ್ವಯಿಸುತ್ತದೆ.

ಮಂಡ್ಯ: ವಿಷಾಹಾರ ಸೇವಿಸಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆ

ಆದೇಶದಲ್ಲಿ ಹೇಳಿರುವಂತೆ, ಮಾರ್ಚ್ 17 ರಂದು, ವಿಶ್ವ ಹಿಂದೂ ಪರಿಷತ್ (ವಿಎಚ್‌ ಪಿ) ಮತ್ತು ಬಜರಂಗ ದಳದ ಸುಮಾರು 200 ರಿಂದ 250 ಸದಸ್ಯರು ನಾಗ್ಪುರದ ಮಹಲ್‌ನಲ್ಲಿರುವ ಶಿವಾಜಿ ಮಹಾರಾಜ್ ಪ್ರತಿಮೆಯ ಬಳಿ ಜಮಾಯಿಸಿ, ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವುದನ್ನು ಬೆಂಬಲಿಸಿ ಪ್ರತಿಭಟಿಸಿದ್ದರು. ಸೋಮವಾರ ಸಂಜೆ, ಬಲ್ಲಾರ್ಪುರ ಪ್ರದೇಶದಲ್ಲಿ ಸುಮಾರು 80 ರಿಂದ 100 ಜನರ ಗುಂಪು ಸೇರಿ ಉದ್ವಿಗ್ನತೆ ಉಂಟಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *