Connect with us

    KARNATAKA

    ಪಾಠ ಮಾಡೋ ಬದಲು, ಈ ‘ಹಳ್ಳಿಮೇಷ್ಟ್ರು’ ಮಾಡಿದ್ದು ಮುತ್ತಿನ ಪಾಠ!?

    ಹಾವೇರಿ, ಡಿಸೆಂಬರ್ 01: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಶಾಲಾ ಶಿಕ್ಷಕನ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.

    ಇಲ್ಲಿನ ವರಗುಡ್ಡ ಗ್ರಾಮದ ಮಾಲತೇಶ್ ಪ್ರೌಢಶಾಲೆ ಶಿಕ್ಷಕ ಮಲ್ಲಪ್ಪ ತಳವಾರ 10ನೇ ತರಗತಿ ವಿದ್ಯಾರ್ಥಿನಿಯ ಫೋನ್ ನಂಬರ್ ಅನ್ನು ತೆಗೆದುಕೊಂಡ ಆಕೆಗೆ ಅಶ್ಲೀಲ ಮೆಸೇಜ್ ಗಳನ್ನ ಕಳಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಅಂತ ಆರೋಪಿಸಿದ್ದಾರೆ. ಇದೇ ವೇಳೆ ಮಲ್ಲಪ್ಪ ತಳವಾರ ವರ್ತನೆ ಬೇಸತ್ತ ಊರಿನ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು, ಕೂಡಲೇ ಆತನನ್ನು ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಸದ್ಯ ವಿದ್ಯಾರ್ಥಿನಿಯ ಕುಟುಂಬ ಮಲ್ಲಪ್ಪನ ವಿರುದ್ಧ ದೂರು ನೀಡಿದ್ದು, ಆತನನ್ನು ಶಾಲೆಯಿಂದ ಅಮಾನತು ಮಾಡಲಾಗಿದ್ದು, ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪಿಎಸ್‍ಐ ವಸಂತ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *