LATEST NEWS
ತಮಿಳುನಾಡಿನಲ್ಲಿ ‘ವಿಜಯ ಪರ್ವ’, ಹಾಲಿ ಪಕ್ಷಗಳಿಗೆ ಉಂಟಾಗಿದೆ ‘ಎದೆ ನಡುಕ’..!!
ಚೆನೈ : ತಮಿಳುನಾಡಿನಲ್ಲಿ ಜಯಲಿತಾ ಬಳಿಕ ಇದೀಗ ದಳಪತಿ ಯ ವಿಜಯ ಪರ್ವ ಆರಂಭವಾಗಿದ್ದು (thalapathy vijay ) ಸಹಜವಾಗಿಯೇ ಹಾಲಿ ಪಕ್ಷಗಳಿಗೆ ನಡುಕ ಉಂಟಾಗಿದೆ.
ಇದೀಗ ದಳಪತಿ ವಿಜಯ್ ಅವರು ಸಿನಿಮಾಕ್ಕೆ ಬ್ರೇಕ್ ಹಾಕಿ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ಹಾಕಿದ್ದು ತಮಿಳಿಗ ವೆಟ್ರಿ ಕಳಗಂ’ ಎಂಬ ಹೆಸರಿನಲ್ಲಿ ಹೊಸ ಪಕ್ಷ ಕಟ್ಟಿ ಅಖಾಡಕ್ಕೆ ಇಳಿದಿದ್ದು ಅವರು ಹೋದಲೆಲ್ಲ ಲಕ್ಷಗಟ್ಟಲೆ ಜನ ಸೇರುತ್ತಿದ್ದಾರೆ. ಅಂದ ಹಾಗೇ ತಮಿಳುನಾಡಿನಲ್ಲಿ ಮೊದಲಿನಿಂದಲೂ ಸಿನಿತಾರೆಯರ ಪಾಲಿಟಿಕ್ಸ್ ಸಕ್ಸಸ್ ಕಂಡಿದೆ. ಎಂಜಿಆರ್ ಬಳಿಕ ಜಯಲಲಿತಾ ತಮಿಳುನಾಡನ್ನು ಆಳಿದ್ದು ಇದೀಗ ದಳಪತಿ ಸರದಿಯಾಗಿದೆ. ‘ತಮಿಳಿಗ ವೆಟ್ರಿ ಕಳಗಂ’ ಅನ್ನೋ ಪಕ್ಷವನ್ನ ಕಟ್ಟಿರುವ ದಳಪತಿ ವಿಜಯ್ ತಮಿಳು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸೋಕೆ ಸಜ್ಜಾಗಿದ್ದಾರೆ. ದಳಪತಿ ವಿಜಯ್ ಅವರ ಮೊಟ್ಟ ರಾಲಿ ನಡೆಸಿ ಎಲ್ಲರ ಹುಬ್ಬೇರಿಸಿದ್ದಾರೆ. ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು 6 ರಿಂದ 7 ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ತಮಿಳಿನ ರಾಜಕೀಯ ಚಿತ್ರಣವನ್ನೇ ಬದಲಿಸೋ ಸೂಚನೆ ಕೊಟ್ಟಿದೆ.
ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು. ಈ ರಾಲಿಗೆ ಸೇರಿದ ಜನಸಾಗರದ ವಿಡಿಯೋ ಸಂಚಲನ ಮೂಡಿಸಿದೆ. ಸೇರಿದ ಜನಸಾಗರ ನೋಡಿ ತಮಿಳುನಾಡು ರಾಜಕಾರಣಿಗಳಿಗೆ ನಡುಕ ಉಂಟಾಗಿದೆ. ರಾಲಿನಲ್ಲಿ ವಿಜಯ್ ಪವರ್ ಫುಲ್ ಸ್ಪೀಚ್ ನೀಡುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
‘ನಾನು ಯಾರನ್ನೂ ಟೀಕೆ ಮಾಡೋದಿಲ್ಲ, ಆದ್ರೆ ಜನರ ಸೇವೆಗಾಗಿ ನಾನು ನನ್ನ ಸಿನಿಮಾ ಕರೀಯರ್ ಬಿಟ್ಟು ಬಂದಿದ್ದೇನೆ. ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ’ ಅಂತ ದಳಪತಿ ಎಮೋಷನಲ್ ಭಾಷಣ ಮಾಡಿದ್ದಾರೆ . 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು , ಇದರ ಮೇಲೆ ದಳಪತಿ ಕಣ್ಣಿಟ್ಟಿದ್ದಾರೆ. ಇಷ್ಟು ದಿನ ತಮಿಳುನಾಡಿನಲ್ಲಿ ಒಂದು ಬಾರಿ ಡಿಎಂಕೆ ಗೆದ್ರೆ, ಮತ್ತೊಮ್ಮೆ ಎಐಎಡಿಎಂಕೆ ಗೆಲ್ತಾ ಇತ್ತು. ಆದ್ರೆ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಮಂಕಾಗಿದೆ. ಈ ಜಾಗವನ್ನ ದಳಪತಿ ತುಂಬೋ ಸಾಧ್ಯತೆಯೇ ದಟ್ಟವಾಗಿದೆ.
You must be logged in to post a comment Login