LATEST NEWS
ವಿಡಿಯೋ- ಕೆನ್ನೆಗೆ ಹೊಡೆದ ರಭಸಕ್ಕೆ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ಯುವಕ..ಆತನ ಮೇಲೆ ಹರಿದ ರೈಲು…!!

ಮುಂಬೈ ಅಗಸ್ಟ್ 18: ರೈಲ್ವೆ ನಿಲ್ದಾಣದಲ್ಲಿ ನಡೆದ ಸಣ್ಣ ಗಲಾಟೆ ವೇಳೆ ವ್ಯಕ್ತಿಯೊಬ್ಬ ಯುವಕನ ಕೆನ್ನೆಗೆ ಹೊಡೆದ ಪರಿಣಾಮ ಯುವಕ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು ಸಾವನಪ್ಪಿದ ಘಟನೆ ಮುಂಬೈನ ಸಿಯೋನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.
ಮೃತನನ್ನು ದಿನೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಸಾವನಪ್ಪಿದ ವ್ಯಕ್ತಿ ಹಾಗೂ ರೈಲ್ವೆ ನಿಲ್ದಾಣದಲ್ಲಿದ್ದ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿದೆ.

ದಿನೇಶ್ ಮಹಿಳೆಯನ್ನು ತಳ್ಳಿದ್ದಾನೆ ಎಂದು ಮಹಿಳೆ ದಿನೇಶ್ ಮೇಲೆ ಹಲ್ಲೆ ನಡೆಸಿದ್ದಾಲೆ. ಈ ವೇಳೆ ಇದನ್ನು ನೋಡಿದ ಮಹಿಳೆಯ ಗಂಡ ದಿನೇಶ್ ಕೆನ್ನೆಗೆ ಬಾರಿಸಿದ್ದಾನೆ. ಆತ ಹೊಡೆದ ಎಟಿಗೆ ದಿನೇಶ್ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದ್ದಾನೆ. ಇದೇ ವೇಳೆ ರೈಲು ಬಂದಿದ್ದು, ಟ್ರ್ಯಾಕ್ ಮೇಲೆ ಬಿದಿದ್ದ ದಿನೇಶ್ ಗೆ ಏಳಲು ಆಗದ ಹಿನ್ನಲೆ ರೈಲು ಆತನ ಮೇಲೆ ಹರಿದಿದ್ದು, ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇದೀಗ ಕೊಲೆ ಕೇಸ್ ಮೇಲೆ ದಂಪತಿಯನ್ನು ಅರೆಸ್ಟ್ ಮಾಡಲಾಗಿದೆ.