LATEST NEWS
ಸುಪ್ರೀಂಕೋರ್ಟ್ ವಿರುದ್ದ ಉಪರಾಷ್ಟ್ರಪತಿ ಆಕ್ರೋಶ – ರಾಷ್ಟ್ರಪತಿಗೆ ಆದೇಶ ನೀಡಲು ಅವರು ಯಾರು..ಹಣ ಸಿಕ್ಕ ನ್ಯಾಯಾಧೀಶರ ಕಥೆ ಏನಾಯ್ತು…!!

ನವದೆಹಲಿ ಎಪ್ರಿಲ್ 18: ದೇಶದ ಸರ್ವೋಚ್ಚ ಹುದ್ದೆಯಲ್ಲಿರುವ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಕಾಲಮಿತಿ ಹಾಕಿ ಆದೇಶ ಹೊರಡಿಸಿರುವುದರ ವಿರುದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟಪ್ರತಿಗೆ ಆದೇಶ ಮಾಡಲು ಸುಪ್ರೀಂಕೋರ್ಟ್ ಗೆ ಯಾವ ಅಧಿಕಾರಿ ಇದೆ ಎಂದು ಪ್ರಶ್ನಿಸಿದ್ದಾರೆ.
ಉಪರಾಷ್ಟ್ರಪತಿ ಧಂಖರ್ ಅವರು ಸಾಂವಿಧಾನಿಕ ಕಾನೂನಿನ ಗಣನೀಯ ಪ್ರಶ್ನೆಗಳನ್ನು ನಿರ್ಧರಿಸಲು ಪೀಠದ ಸಂಯೋಜನೆಯೊಂದಿಗೆ ವ್ಯವಹರಿಸುವ ಆರ್ಟಿಕಲ್ 145(3) ಅನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದರು. “ನೀವು ಭಾರತದ ರಾಷ್ಟ್ರಪತಿಗಳಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ಒಪ್ಪಲು ಸಾಧ್ಯವಿಲ್ಲ. ಅದು ಯಾವ ಆಧಾರದ ಮೇಲೆ ಎಂಬುದು ಮುಖ್ಯ. ಸಂವಿಧಾನದ ಅಡಿಯಲ್ಲಿ ನೀವು ಹೊಂದಿರುವ ಏಕೈಕ ವಿಶೇಷ ಅಧಿಕಾರವೆಂದರೆ ಆರ್ಟಿಕಲ್ 145(3) ನೇ ವಿಧಿಯ ಅಡಿಯಲ್ಲಿ ಸಂವಿಧಾನವನ್ನು ವ್ಯಾಖ್ಯಾನಿಸುವುದು. ಅಲ್ಲಿ ಐದು ಅಥವಾ ಹೆಚ್ಚಿನ ನ್ಯಾಯಾಧೀಶರು ಇರಬೇಕು” ಎಂದು ಅವರು ಹೇಳಿದ್ದಾರೆ.

ನಮ್ಮಲ್ಲಿ ಶಾಸನ ರಚಿಸುವ, ಕಾರ್ಯಕಾರಿ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ಇದ್ದಾರೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಏಕೆಂದರೆ ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದರು.ತಮ್ಮ ಮಾತುಕತೆಯ ವೇಳೆ, ಇತ್ತೀಚೆಗೆ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರ ಮನೆಯಲ್ಲಿ ಕೋಟ್ಯಂತರ ರೂ.ಗಳು ಪತ್ತೆಯಾಗಿದ್ದ ಪ್ರಕರಣವನ್ನು ಉಲ್ಲೇಖಿಸಿದ ಅವರು, ನ್ಯಾಯಮೂರ್ತಿಗಳ ಮನೆಯಲ್ಲಿ ಹಣ ಸಿಕ್ಕಿದ್ದು ಮೇ 14 ಹಾಗೂ 15ರ ನಡುವಿನ ಮಧ್ಯರಾತ್ರಿ. ಆದರೆ, ಅದು ಬೆಳಕಿಗೆ ಬಂದಿದ್ದು ಒಂದು ವಾರದ ನಂತರ. ಆ ಒಂದು ವಾರ ಆ ವಿಚಾರವನ್ನು ನ್ಯಾಯಾಂಗ ಯಾಕೆ ಮುಚ್ಚಿಟ್ಟಿತ್ತು ? ಈ ಘಟನೆ ನಮ್ಮಲ್ಲಿ ಹಲವಾರು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಧನ್ಕರ್ ಹೇಳಿದ್ದಾರೆ.
ದಾಖಲೆಗಳಿಲ್ಲದ ಹಣ ನ್ಯಾ. ವರ್ಮಾ ಅವರ ನಿವಾಸದಲ್ಲಿ ಸಿಕ್ಕರೂ ಅವರ ವಿರುದ್ಧ ಯಾಕೆ ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ’’ ಎಂದು ಪ್ರಶ್ನಿಸಿರುವ ಧನ್ಕರ್, “ಈ ದೇಶದ ವ್ಯಾಪ್ತಿಯಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ದ ಎಫ್ಐಆರ್ ದಾಖಲಾಗುತ್ತದೆ. ಆದರೆ, ಜಡ್ಜ್ ಗಳು ತಪ್ಪು ಮಾಡಿದಾಗ ಮಾತ್ರ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಂಗದಲ್ಲಿರುವವರ ಅನುಮತಿ ಬೇಕು. ಇದು ಸಂವಿಧಾನದಲ್ಲಿ ಇಲ್ಲ, ಆದರೆ ನ್ಯಾಯಾಂಗ ಮಾಡಿಕೊಂಡಿವ ವ್ಯವಸ್ಥೆ’’ ಎಂದು ಹೇಳಿದ್ದಾರೆ.
2 Comments