LATEST NEWS
ಉಡುಪಿ – ಬಿಜೆಪಿ ಹಿರಿಯ ಮುಖಂಡ ಮಾಜಿ ಶಾಸಕ ಎ.ಜಿ ಕೊಡ್ಗಿ ಇನ್ನಿಲ್ಲ

ಕುಂದಾಪುರ ಜೂನ್ 13: ಕರಾವಳಿಯ ಬಿಜೆಪಿಯ ಭೀಷ್ಮ ಹಿರಿಯ ಮುಖಂಡ ಎ.ಜಿ ಕೊಡ್ಗಿ ಅವರು ಅನಾರೋಗ್ಯಿಂದ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು, ಇತ್ತೀಚೆಗೆ ಕೊಡ್ಗಿ ಅವರಿಗೆ ಜ್ವರ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.
ಸುಮಾರು 56 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿದ್ದ ಇವರು 1972 ಮತ್ತು 1978ರಲ್ಲಿ ಬೈಂದೂರು ಕ್ಷೇತ್ರದ ಶಾಸಕರಾಗಿದ್ದರು. ಇದಕ್ಕೂ ಮೊದಲು ಕಾಂಗ್ರೇಸ್ ನಲ್ಲಿದ್ದರು. 1993ರಲ್ಲಿ ಬಿಜೆಪಿ ಸೇರಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸಹಿತ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರಾವಳಿಯಲ್ಲಿ ಕಾಂಗ್ರೇಸ್ ಭದ್ರಕೋಟೆಯನ್ನು ಛಿದ್ರಮಾಡಿ ಬಿಜೆಪಿಗೆ ಬಾಗಿಲು ತೆಗೆದ ಕೀರ್ತಿ ಕೋಡ್ಗಿಯವರಿಗೆ ಸಲ್ಲುತ್ತದೆ.
