LATEST NEWS
ಚಿರತೆ ರಕ್ಷಣೆಗಾಗಿ 25 ಅಡಿ ಆಳದ ಬಾವಿಗಿಳಿದ ಡಾ. ಮೇಘನಾ…..ಕಾರ್ಯಾಚರಣೆಯ ರೋಚಕ ಕಥೆ…!!

ಚಿರತೆ ರಕ್ಷಣೆಗಾಗಿ 25 ಅಡಿ ಆಳದ ಬಾವಿಗಿಳಿದ ಡಾ. ಮೇಘನಾ…..ಕಾರ್ಯಾಚರಣೆಯ ರೋಚಕ ಕಥೆ…!!
ಮುದ್ದಾದ ನಾಯಿ, ಬೆಕ್ಕುಗಳ ಜೊತೆ ಆಡೋಕೆ ಚೆನ್ನಾಗಿರುತ್ತದೆ.. ಸಿಂಹ, ಹುಲಿ. ಚಿರತೆಯನ್ನೆಲ್ಲಾ ಕಂಡ್ರೆ ಯಾರಿಗೆ ತಾನೇ ಪ್ರೀತಿಯಿದೆ ಹೇಳಿ. ಅವುಗಳನ್ನು ಏನಿದ್ರೂ ದೂರದಿಂದಷ್ಟೇ ಬೋನಿನಲ್ಲಿ ನೋಡೋದು ಚೆಂದ. ಹತ್ರ ಹೋಗೋಕೆ ಎಲ್ಲರೂ ಬಾಯಿ ಬಿಡ್ತಾರೆ. ಅದರ ದೊಡ್ಡ ದೊಡ್ಡ ಕಣ್ಣುಗಳು, ಉಗುರು, ನಡೆಯುವ ಠೀವಿಯನ್ನು ನೋಡಿದ್ರೇನ ಭಯವಾಗುತ್ತೆ. ಆದ್ರೆ ಮಂಗಳೂರಿನಲ್ಲೊಬ್ಬ ಮಹಿಳೆ ಬಾವಿಯೊಳಗಿದ್ದ ಒಂದು ವರ್ಷದ ಚಿರತೆಯನ್ನು ರಕ್ಷಿಸಿದ್ದಾರೆ. ಪಶು ವೈದ್ಯೆಯಾಗಿರುವ ಡಾ.ಮೇಘನಾ ಧೈರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ. ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಬಳಿ ನಡೆದ ಈ ಘಟನೆಯಲ್ಲಿ ಚಿರತೆಯನ್ನು ರಕ್ಷಿಸಲು ಮೇಘನಾ ಅವರು ಸುಮಾರು 25 ಅಡಿ ಆಳದ ಬಾವಿಗೆ ಬೋನಿನೊಳಗೆ ಕುಳಿತು ಇಳಿದು, ಬಳಿಕ ಚಿರತೆಗೆ ಅರವಳಿಕೆ ಮದ್ದನ್ನು ನೀಡಿ ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯದ ಬಗ್ಗೆ ಸ್ವತಃ ಮೇಘನಾ ಅವರು ಮಂಗಳೂರು ಮಿರರ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ….

Exclusive Interview