LATEST NEWS
ಚಿಕಿತ್ಸೆ ನೀಡದೇ ರೋಗಿಯೊಬ್ಬನನ್ನು ಹೊರದಬ್ಬಿದ ವೆನ್ಲಾಕ್ ಆಸ್ಪತ್ರೆ

ಚಿಕಿತ್ಸೆ ನೀಡದೇ ರೋಗಿಯೊಬ್ಬನನ್ನು ಹೊರದಬ್ಬಿದ ವೆನ್ಲಾಕ್ ಆಸ್ಪತ್ರೆ
ಮಂಗಳೂರು ಜುಲೈ 3: ಚಿಕಿತ್ಸೆ ನೀಡದೇ ರೋಗಿಯೊಬ್ಬನನ್ನು ಹೊರದಬ್ಬಿದ ಘಟನೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ. ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದಾಗಿ ಜ್ವರಬಂದು ಚಿಕಿತ್ಸೆ ಪಡೆಯಲೆಂದು ಜಿಲ್ಲಾ ವೆನ್ ಲಾಕ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರನ್ನು ಸರಿಯಾಗಿ ಚಿಕಿತ್ಸೆ ನೀಡದೆ ಹೊರ ಕಳುಹಿಸಲಾಗಿದೆ.
ಪುತ್ತೂರು ಮೂಲದ ಜೆಸಿಬಿ ಆಪರೇಟರ್ ರಾಜಕುಮಾರ್ ಕಳೆದ ತಿಂಗಳು ಜೂನ್ 28ಕ್ಕೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ದಿನವೊಂದಕ್ಕೆ ಎಂಟು ಬಾಟಲ್ ಗ್ಲೂಕೋಸ್ ನೀಡಲು ನರ್ಸ್ ಗಳಿಗೆ ಸೂಚನೆ ನೀಡಿದ್ದರು. ಆದರೆ, ನರ್ಸ್ ಗಳು ಮಾತ್ರ ರೋಗಿ ಹಾಗೂ ಅವರ ಪತ್ನಿಗೆ ನಿಂದಿಸಿ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ನರ್ಸ್ ಗಳ ವರ್ತನೆ ಪ್ರಶ್ನಿಸಿದಕ್ಕೆ ಚಿಕಿತ್ಸೆ ಯನ್ನು ನಿಲ್ಲಿಸೋದಾಗಿ ಬೆದರಿಸಿದ್ದಲ್ಲದೇ, ಗ್ಲೂಕೋಸ್ ಪಡೆಯುತ್ತಿದ್ದ ರೋಗಿ ರಾಜಕುಮಾರ್ ಗೆ ಅರ್ಧಕ್ಕೆ ಡ್ರಾಪ್ಸ್ ಪೂರೈಕೆ ನಿಲ್ಲಿಸಿ ಇಂದು ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಹೊರ ಕಳುಹಿಸಿದ್ದಾರೆ ಎಂದು ಹೇಳಳಾಗಿದೆ. ಅಲ್ಲದೆ ಅವರ ಕೈಗೆ ಚುಚ್ಚಲಾಗಿದ್ದ ಸಿರಿಂಜನ್ನು ಮಾತ್ರ ಇನ್ನೂ ಹೊರತೆಗೆದಿಲ್ಲ.
ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಜತೆ ಉಟ್ಟ ಬಟ್ಟೆಯಲ್ಲಿಯೇ ರಾಜ್ ಕುಮಾರ್ ಆಸ್ಪತ್ರೆಯಿಂದ ಹೊರಬಂದಿದ್ದು, ಬೇರೆ ದಾರಿ ಕಾಣದೆ ಕುಟುಂಬ ಕಂಗಾಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸಹಿತವಾಗಿ ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜ್ ಕುಮಾರ್ ಆರೋಪಿಸಿದ್ದಾರೆ.