Connect with us

    LATEST NEWS

    ಚುನಾವಣಾ ಚೆಕ್ ಪೋಸ್ಟ್ ಹೊಡೆದುರುಳಿಸಿದ ಟೆಂಪೋ ಟ್ರಾವೆಲ್ಲರ್ ವಿಡಿಯೋ ವೈರಲ್

    ಚುನಾವಣಾ ಚೆಕ್ ಪೋಸ್ಟ್ ಹೊಡೆದುರುಳಿಸಿದ ಟೆಂಪೋ ಟ್ರಾವೆಲ್ಲರ್ ವಿಡಿಯೋ ವೈರಲ್

    ಉಡುಪಿ ಮೇ 01: ಇದೊಂದು ಸಿಸಿ ಕೆಮರಾ ದೃಶ್ಯಾವಳಿಯನ್ನು ನೋಡಿ. ನೋಡಲು ಎಷ್ಟು ಭಯಾನಕವೋ ಅಷ್ಟೇ ಸಿನಿಮೀಯವಾಗಿದೆ. ಅತಿಯಾದ ವೇಗದಲ್ಲಿ ಬಂದ ಟೆಂಪೋಟ್ರಾವಲರ್ ಬ್ಯಾರಿಕೇಡ್ ಗಳನ್ನು ಹೊಡೆದುರುಳಿಸಿ ಹೊಗುವ ದೃಶ್ಯ ಕಂಡರೆ ಎದೆ ಜಲ್ ಅನ್ನುತ್ತೆ.

    ಈ ಘಟನೆ ನಡೆದಿದ್ದು ಉಡುಪಿ ಜಿಲ್ಲೆ ಪೂರ್ವಗಡಿ ಹೆಬ್ರಿ ಸಮೀಪದ ಸೋಮೇಶ್ವರದಲ್ಲಿ. ಚುನಾವಣೆ ಕಾರಣ ಕ್ಕೆ ಇಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಪೊಲೀಸರು ಮತ್ತು ಯೋಧರ ತಂಡ ಉರಿ ಬಿಸಿಲಲ್ಲಿ ಕಾವಲು ಕಾಯುತ್ತಿದ್ದರು. ಸಂಜೆ ನಾಲ್ಕರ ಸುಮಾರಿಗೆ ಇದ್ದಕ್ಕಿದ್ದಂತೆ ನುಗ್ಗಿದ ಈ ವಾಹನ ಎದುರಿಗಿದ್ದ ಮೂರು ಬ್ಯಾರಿಕೇಡ್ ಗಳನ್ನು ಉಡಾಯಿಸಿದೆ.

    ತಪಾಸಣೆ ನಡೆಸುತ್ತಿದ್ದ ಪೊಲೀಸರು ಮತ್ತು ಯೋಧರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸಾಲಾಗಿ ನಿಂತಿದ್ದ ಕಾರುಗಳು ಎಡಬಲಕ್ಕೆ ಹೋಗಿ ಬಚಾವಾಗಿವೆ. ಎಲ್ಲವೂ ಅರೆಕ್ಷಣದಲ್ಲಿ ಮುಗಿದು ಹೋಗಿದೆ. ಇಷ್ಟಾದರೂ ಆ ಟೆಂಪೋಟ್ರಾವಲರ್ ನಿಲ್ಲಿಸಿಲ್ಲ.
    ಅಲ್ಲಿದ್ದ ಜನ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಅರೆಕ್ಷಣ ಏನಾಗಿದೆ ಅನ್ನೋದೇ ತಿಳಿಯಲಿಲ್ಲ. ವಿಷಯ ಏನಪ್ಪಾ ಅಂದ್ರೆ ಹಾಸನ‌ಕಡೆಯಿಂದ ಧರ್ಮಸ್ಥಳ ಕ್ಕೆ ಹೋಗುತ್ತಿದ್ದ ವಾಹನಕ್ಕೆ ಇಳಿಜಾರಿನಲ್ಲಿ ಬ್ರೇಕ್ ಬೀಳಲಿಲ್ಲ. ಎಷ್ಟೇ ಪ್ರಯತ್ನ ಪಟ್ಡರೂ ಗಾಡಿ ನಿಲ್ಲಿಸಲಾಗಿಲ್ಲ. ಆದರೂ ಚಾಲಕ ಚಾಕಚಕ್ಯತೆಯಿಂದ ಸಂಭಾವ್ಯ ಅಪಾಯ ತಪ್ಪಿಸಿದ್ದಾನೆ.

    ಒಂದಿಷ್ಡು ದೂರ ಹೋಗಿ ಗಾಡಿ ನಿಲ್ಲಿಸಿದ್ದಾನೆ. ಅದೃಷ್ಟವಷಾತ್ ವಾಹನದಲ್ಲಿ ಇದ್ದವರಿಗಾಗಲೀ, ಭದ್ರತಾ ಸಿಬಂದಿಗಳಿಗಾಗಲೀ ಯಾವುದೇ ಅಪಾಯವಾಗಿಲ್ಲ. ಆದರೆ ಈ ದೃಶ್ಯ ಎಂಥವರನ್ನೂ ಒಂದು ಕ್ಷಣ ಬೆಚ್ವಿಬೀಳಿಸುತ್ತೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply