Connect with us

    LATEST NEWS

    ಕಾರ್ಕಳ ವಿಧಾನಸಭಾ ಕ್ಷೇತ್ರ , ಹರ್ಷ ಮೊಯಿಲಿ ಕಾಂಗ್ರೇಸ್ ಅಭ್ಯರ್ಥಿ ?

    ಕಾರ್ಕಳ ವಿಧಾನಸಭಾ ಕ್ಷೇತ್ರ , ಹರ್ಷ ಮೊಯಿಲಿ ಕಾಂಗ್ರೇಸ್ ಅಭ್ಯರ್ಥಿ ?

    ಕಾರ್ಕಳ ಫೆಬ್ರವರಿ 6: ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಹಿರಿಯ ಕಾಂಗ್ರೇಸ್ ಮುಖಂಡ ವೀರಪ್ಪ ಮೊಯಿಲಿ ಅವರ ಮಗ ಹರ್ಷ ಮೊಯಿಲಿ ಹೆಸರು ಕೇಳಿ ಬರುತ್ತಿದೆ.

    ವೀರಪ್ಪ ಮೊಯಿಲಿ ಕಾರ್ಕಳ ಮೂಲದವರಾಗಿದ್ದು, ಹಲವು ವರ್ಷಗಳಿಂದ ಕಾರ್ಕಳವನ್ನು ಪ್ರತಿನಿಧಿಸಿದ್ದರು. ಈ ಹಿನ್ನಲೆಯಲ್ಲಿ ತಮ್ಮ ಮಗ ಹರ್ಷ ಮೊಯಿಲಿ ಅವರನ್ನು ರಾಜಕೀಯವಾಗಿ ತರಲು ಕಾರ್ಕಳ ವನ್ನು ಆಯ್ದುಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹರ್ಷ ಮೊಯಿಲಿ ಅವರನ್ನು ನಿಲ್ಲಿಸಲು ವೀರಪ್ಪ ಮೊಯಿಲಿ ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಕೊನೆಯದಾಗಿ ನಡೆದ ಕಾಂಗ್ರೇಸ್ ನ ಆಂತರಿಕ ಚುನವಾಣೆಯಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.

    ಈ ಹಿನ್ನಲೆಯಲ್ಲಿ ತಮ್ಮ ತವರೂರಾದ ಕಾರ್ಕಳದ ಮೂಲಕ ಹರ್ಷ ಮೊಯಿಲಿ ಅವರನ್ನು ರಾಜಕೀಯಕ್ಕೆ ತರಲು ವೀರಪ್ಪ ಮೊಯಿಲಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಈ ಸಂಬಂಧ ಈಗಾಗಲೇ ಕಾರ್ಕಳದಲ್ಲಿರುವ ತಮ್ಮ ಆಪ್ತ ವಲಯಕ್ಕೆ ದೂರವಾಣಿ ಕರೆ ಮಾಡಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಹರ್ಷ ಮೊಯಿಲಿ ಕಾರ್ಕಳದಲ್ಲಿ ಟಿಕೇಟ್ ಆಕಾಂಕ್ಷಿಯಾಗಲಿದ್ದಾರೆ ಎಂದು ಹೇಳಲಾಗಿದೆ.

    ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಶಾಸಕರಾಗಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಅವರೇ ಅಂತಿಮವಾಗಲಿದ್ದಾರೆ. ಆದರೆ ಕಾಂಗ್ರೇಸ್ ನಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ, ಮುನಿಯಾಲು ಉದಯಕುಮಾರ್ ಅವರ ಹೆಸರು ಕೇಳಿ ಬಂದಿದ್ದು, ಈಗ ಹರ್ಷ ಮೊಯಿಲಿ ಹೆಸರು ಸೇರ್ಪಡೆಗೊಂಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *