LATEST NEWS
ವರಾಹ ರೂಪಂ ಹಾಡಿನ ವಿವಾದದ ಬಗ್ಗೆ ನಿರ್ಮಾಪಕರಿಂದ ಸೂಕ್ತ ಉತ್ತರ – ರಿಷಬ್ ಶೆಟ್ಟಿ

ಮಂಗಳೂರು ನವೆಂಬರ್ 03: ಕಾಂತಾರ ಸಿನಿಮಾದ ಜನಪ್ರಿಯವಾದ ವರಾಹ ರೂಪಂ’ ನಮ್ಮ ಸಂಗೀತ ನಿರ್ದೇಶಕರು ಮಾಡಿರುವ ಸ್ವಂತ ಹಾಡು ಅದು. ಸಿನಿಮಾ ಹಿಟ್ ಆದಾಗ ಇಂತಹ ಆರೋಪಗಳು ಬರುವುದು ಸಹಜ. ಈ ವಿವಾದಕ್ಕೆ ನಮ್ಮ ನಿರ್ಮಾಪಕರು ಹಾಗೂ ಸಂಗೀತ ನಿರ್ದೇಶಕರು ಸೂಕ್ತ ಉತ್ತರ ನೀಡುತ್ತಾರೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಕಾಂತಾರ ಸಿನಿಮಾ ಹಿಟ್ ಆದ ಬಳಿಕ, ಬುಧವಾರ ಪತ್ನಿ ಪ್ರಗತಿ ಶೆಟ್ಟಿ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ, ಹೆಗ್ಗಡೆ ದಂಪತಿಯ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಸಿನಿಮಾ ಬಿಡುಗಡೆಗೆ ಮುಂಚೆ ಇಲ್ಲಿಗೆ ಬಂದು ಆಶೀರ್ವಾದ ತೆಗೆದುಕೊಂಡು ಹೋಗಿದ್ದೆ. ಟ್ರೇಲರ್ ಬಿಡುಗಡೆ ಆದಾಗ ಬ೦ದಿದ್ದೆ. ಸಿನಿಮಾ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ರೂಪದಲ್ಲಿ ಯಶಸ್ವಿಯಾಯಿತು ಎಂದರು.
