BELTHANGADI
ಬೆಳ್ತಂಗಡಿ – ಜಾಗದ ತಕರಾರು 25 ಮೇಕೆಯ ತಲೆ ತಂದು ವಾಮಾಚಾರ

ಬೆಳ್ತಂಗಡಿ ಜೂನ್ 11 :ಜಾಗದ ತಕರಾರಿಗೆ ಸಂಬಂಧಿಸಿದಂತೆ ಎರಡು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಗಲಾಟೆ ಇದೀಗ ವಾಮಾಚಾರ ಹಂತಕ್ಕೆ ತಲುಪಿದ್ದು, ವಿವಾದಿತ ಜಾಗದಲ್ಲಿ 25 ಮೇಕೆಯ ತಲೆ ಕಡಿದು ಅದರ ಜೊತೆ 25 ಮಂದಿಯ ಪೋಟೋ ಇಟ್ಟು ವಾಮಾಚಾರ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ಜೂ.10 ರಂದು ಬೆಳಕಿಗೆ ಬಂದಿದೆ.
ಕೇರಳ ಮೂಲದ ಗೋಪಾ ಕುಮಾರ್ ಮತ್ತು ಸುಮೇಶ್ ಎಂಬವರಿಗೆ ಸೇರಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬೋಳಿಯಾರ್ ಎಂಬಲ್ಲಿ 25 ಎಕರೆ ಜಾಗವನ್ನು ಕಳೆದ ವರ್ಷ ಮಂಗಳೂರು ವೈಷ್ಣವಿ ಟ್ರಾನ್ಸ್ ಪೋರ್ಟ್ ಮಾಲೀಕ ರಾಜೇಶ್ ಪ್ರಭು ಎಂಬಾತರಿಗೆ ಮಾರಾಟ ಮಾಡಿದ್ದರು. ಈ ನಡುವೆ ದಾಖಲೆ ಪತ್ರ ವರ್ಗಾವಣೆ ಮಾಡಿಸಿ ಜಾಗದ 8 ಕೋಟಿ ರೂಪಾಯಿ ಹಣ ನೀಡದೆ ರಾಜೇಶ್ ಪ್ರಭು ಮೋಸ ಮಾಡಿದ್ದ. ಈ ಬಗ್ಗೆ ಹಲವು ಸಮಯದವರೆಗೆ ಗಲಾಟೆ ನಡೆಯುತ್ತಿತ್ತು. ನಂತರ ಮಾರಾಟ ಮಾಡಿದ ಜಾಗದ ಮಾಲೀಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ಸೇರಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ಬಗ್ಗೆ ಬೆಳ್ತಂಗಡಿ ಕೋರ್ಟ್ ನಲ್ಲಿ ಹಣ ನೀಡದೆ ಮೋಸ ಮಾಡಿದ ಬಗ್ಗೆ ದಾಖಲೆಗಳ ಮೂಲಕ ತಿಳಿದಿದ್ದು, ಜಾಗವನ್ನು ಮೂರನೇ ವ್ಯಕ್ತಿಗೆ ರಾಜೇಶ್ ಪ್ರಭು ಮಾರಾಟ ಮಾಡಬಾರದು ಮತ್ತು ಹಿಂದಿನ ಮೂಲ ಜಾಗದ ಮಾಲೀಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ವಶಕ್ಕೆ ಬೆಳ್ತಂಗಡಿ ಕೋರ್ಟ್ ನೀಡಿತ್ತು. ಇದೀಗ ಜಾಗಕ್ಕೆ ಪ್ರವೇಶ ಮಾಡುವ ಗೇಟಿನ ಮುಂದೆ ಜೂ.9 ರಂದು ರಾತ್ರಿ 25 ಮೇಕೆಯ ತಲೆ ಕಡಿದು ಅದಕ್ಕೆ 25 ಮಂದಿಯ ಫೋಟೋಗಳನ್ನು ಇಟ್ಟು ಜಾಗ ಖರೀದಿ ಮಾಡಿ ಹಣ ಮೋಸ ಮಾಡಿದ್ದ ಮಂಗಳೂರಿನ ವೈಷ್ಣವಿ ಟ್ರಾನ್ಪೋರ್ಟ್ ಮಾಲೀಕನಾಗಿರುವ ಪ್ರಭಾವಿ ವ್ಯಕ್ತಿ ರಾಜೇಶ್ ಪ್ರಭು ಎಂಬಾತ ವಾಮಾಚಾರ ಮಾಡಿದ್ದಾನೆ ಎಂದು ಆರೋಪ ಕೇಳಿಬರುತ್ತಿದ್ದೆ.