LATEST NEWS
ಉದ್ಯಾವರ ಗ್ರಾಮದ ಪಿತ್ರೋಡಿಯ ಫ್ಯಾಕ್ಟರಿ ಕೆಲಸಕ್ಕೆ ಸೇರಲು ಬಂದಿದ್ದ ಯುವತಿ ಪ್ರೇಮಾ ನಾಪತ್ತೆ

ಉಡುಪಿ ಏಪ್ರಿಲ್ 20 : ಜಿಲ್ಲೆಯ ಉದ್ಯಾವರ ಗ್ರಾಮದ ಪಿತ್ರೋಡಿಯ ಫ್ಯಾಕ್ಟರಿ ಒಂದಕ್ಕೆ ಕೆಲಸಕ್ಕೆ ಸೇರಲು ಬಂದು ಉದ್ಯಾವರದ ರೂಮಿನಲ್ಲಿ ಉಳಿದುಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಕಾಸರಕೋಡ ಮಲಬಾರ ಕೇರಿ ನಿವಾಸಿ ಪ್ರೇಮಾ (25) ಎಂಬ ಯುವತಿಯು ಏಪ್ರಿಲ್ 15 ರಂದು ರೂಮಿನಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಕೊಂಕಣಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820- 2572333, ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ:08258-231333, ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂಖ್ಯೆ: 0820- 2534777 ಹಾಗೂ ಜಿಲ್ಲಾ ನಿಸ್ತಂತು ಕೊಠಡಿ ದೂ.ಸಂಖ್ಯೆ:0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
