LATEST NEWS
ಮುಗ್ದ ಮೀನುಗಾರರನ್ನು ಬಳಸಿ ಬಿಜೆಪಿಯಿಂದ ರಾಜಕೀಯ – ಯ.ಟಿ ಖಾದರ್

ಮುಗ್ದ ಮೀನುಗಾರರನ್ನು ಬಳಸಿ ಬಿಜೆಪಿಯಿಂದ ರಾಜಕೀಯ – ಯ.ಟಿ ಖಾದರ್
ಮಂಗಳೂರು ಜುಲೈ 16: ಮುಗ್ದ ಮೀನುಗಾರರನ್ನು ಬಳಸಿ ರಾಜಕೀಯ ಮಾಡಲಾಗುತ್ತಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ ಖಾದರ್ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಯು.ಟಿ ಖಾದರ್ ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರಾವಳಿ ಜಿಲ್ಲೆಗಳಿಗೆ ಹಲವಾರು ಯೋಜನೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಏನೂ ತಿಳಿಯದ ಮುಗ್ಧ ಮೀನುಗಾರರನ್ನುಕೆಲವರು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಇಂಗ್ಲಿಷ್ ಪ್ಲೆಕಾರ್ಡ್ ಗಳನ್ನು ಮೀನುಗಾರರ ಕೈ ಯಲ್ಲಿ ಹಿಡಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಮೀನುಗಾರರ ಸಾಲಮನ್ನ ಮಾಡದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮೀನುಗಾರರ ಆಕ್ರೋಶ ವಿಚಾರವನ್ನು ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ರಾಜಕೀಯ ಪ್ರೇರಿತ ಮತ್ತು ಆಧಾರ ರಹಿತ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ರಾಮದಾಸ್ ಅವರ ಈ ಆರೋಪ ಆಧಾರರಹಿತವಾಗಿದ್ದು ರಾಜಕೀಯ ದುರುದ್ಧೇಶ ದಿಂದ ಕೂಡಿದೆ ಎಂದು ಅವರ ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಯ ಯಶಸ್ಸು, ಈ ಯೋಜನೆಗೆ ದೊರೆತಿರುವ ಜನಮನ್ನಣೆಯನ್ನು ಸಹಿಸದೆ ರಾಮದಾಸ್ ಅವರು ತಮ್ಮ ಆಧಾರ ರಹಿತ ಹೇಳಿಕೆ ಯಿಂದ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿರುವ ಇಂದಿರಾ ಕ್ಯಾಂಟೀನ್ ಒಟ್ಟು 211.24 ಕೋಟಿ ರೂಪಾಯಿ ಮೊತ್ತದ ಯೋಜನೆ. ಈ ಯೋಜನೆಯಲ್ಲಿ ಇದುವರೆಗೆ 113.78 ಕೋಟಿ ರೂಪಾಯಿ ವೆಚ್ಚವಾಗಿದ್ದು, ರಾಜ್ಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 136 ಕ್ಯಾಂಟೀನ್‌ಗಳ ಪೈಕಿ 72 ಕ್ಯಾಂಟೀನ್ ಈಗಾಗಲೇ ಕಾರ್ಯಾರಂಭಗೊಂಡಿದೆ. ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.