FILM
ನಾನು ಯಾಕೆ ಮೈತುಂಬಾ ಬಟ್ಟೆ ಹಾಕೋದಿಲ್ಲ ಎನ್ನುವುದಕ್ಕೆ ಕಾರಣ ಕೊಟ್ರು ಉರ್ಫಿ ಜಾವೇದ್
ಮುಂಬೈ ಜನವರಿ 08: ಸಾರ್ವಜನಿಕ ಪ್ರದೇಶಗಳಲ್ಲೂ ತಮ್ಮ ಡಿಫರೆಂಟ್ ಸ್ಟೈಲ್ ನಿಂದ ಸದಾ ಸುದ್ದಿಯಲ್ಲಿರುವ ಮಾಡೆಲ್ ಉರ್ಫಿ ಜಾವೇದ್ ಇದೀಗ ತಾವು ತುಂಡುಗೆ ಧರಿಸುವುದಕ್ಕೆ ಕಾರಣವೇನು ಎನ್ನುವುದನ್ನು ಬಹಿರಂಗ ಮಾಡಿದ್ದಾರೆ.
ಉರ್ಫಿ ಜಾವೇದ್ ಗೆ ಮೈತುಂಬಾ ಬಟ್ಟೆಗಳನ್ನು ಧರಿಸುವುದರ ಹಿಂದೆ ಆರೋಗ್ಯದ ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ. ಸ್ಕಿನ್ ಅಲರ್ಜಿ ಆಗುವುದರಿಂದ ಸಣ್ಣ ಬಟ್ಟೆಗಳನ್ನು ಧರಿಸುತ್ತೇನೆ ಎನ್ನುತ್ತಾರೆ. ಅಲ್ಲದೆ ಉರ್ಫಿ ತನ್ನ ಕಾಲುಗಳಿಗೆ ಆಗಿರುವ ಅಲರ್ಜಿಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ಉರ್ಫಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಇದರಲ್ಲಿ ಅವರು ತಮ್ಮ ಕಾಲುಗಳ ಮೇಲಿನ ಗಾಯಗಳನ್ನು ತೋರಿಸಿದ್ದಾರೆ. ನಾನು ಉಣ್ಣೆಯ ಬಟ್ಟೆ ಅಥವಾ ಪೂರ್ಣ ಬಟ್ಟೆಗಳನ್ನು ಧರಿಸಿದಾಗ ಈ ರೀತಿ ಆಗುತ್ತದೆ ನೋಡಿ ಎಂದು ಉರ್ಫಿ ಹೇಳುತ್ತಾರೆ. ನನ್ನ ದೇಹಕ್ಕೆ ಬಟ್ಟೆ ಅಲರ್ಜಿಯಾಗಿದೆ. ಇದು ದೊಡ್ಡ ಸಮಸ್ಯೆಯಾಗಿದೆ. ಈ ಕಾರಣದಿಂದಲೇ ನಾನು ಬಟ್ಟೆಗಳನ್ನು ಧರಿಸಲು ಇಷ್ಟಪಡುವುದಿಲ್ಲ ಎಂದರು.